Skip to main content

Posts

ಕುಂಭಕರ್ಣನ ಡೈರಿಯಿಂದ

ಲೋ ಪಚ್ಚು ನೀನು ಮೂಲತಃ ಯಾವ ಊರಿನವನೋ ??ಬೆಳಿಗ್ಗೆ ಎದ್ದವನೇ ಪ್ರಶಾಂತನಿಗೆ ಕೇಳಿದೆ . ಯಾಕೋ ಏನಾಯ್ತು ?? ಎಂದ. ಏನಿಲ್ಲ ಗುರುವಾರ ರಾತ್ರಿ ನಿದ್ರೆಯಲ್ಲಿ ನೀನು ಕೂಚಿಪುಡಿ ಮಾಡ್ತಾ ಇದ್ದೆ ಆಗ ನೀನು ಆಂಧ್ರದವ ಎಂದುಕೊಂಡೆ . ಮೊನ್ನೆರಾತ್ರಿ ಕಥಕ್ಕಳಿಯಲ್ಲಿ ನಿನ್ನ talent ನೋಡಿ ನೀನು ಪಕ್ಕ ಮಲ್ಲು ಅಂದು ಡಿಸೈಡ್ ಮಾಡಿದೆ .ಆದರೆ ನಿನ್ನೆ ನೀನು ಮಾಡಿದ ಯಕ್ಷಗಾನ ನೋಡಿ full confuse ಆದೆ . ಏನ್ Performance ಲೇ ಅದು . ಗಣಪತಿ ಪೂಜೆ ಮುಗಿದು ಇನ್ನೇನು ಕೋಡಂಗಿ ಪ್ರವೇಶ ಮಾಡಬೇಕೆನ್ನುವಾಗ ನಿಲ್ಲಿಸಿಬಿಟ್ಟೆ . ಅದನ್ನು ನೋಡಿ ನೀನು ಕನ್ನಡಮ್ಮನ ಕಣ್ಮಣಿ ಎಂದು conclude ಮಾಡಿದ್ದೇನೆ ಸರೀನಾ?? ಏನೇ ಹೇಳು ನಿನ್ನದು ಬಹುಮುಖ ಪ್ರತಿಭೆ ಕಣೋ ಎಂದೆನು. ಏನ್ ಮಾಡ್ಲೋ ?? ಅಪ್ಪನದು Job Transfer ಆಗುತ್ತಾ ಇರುತ್ತೆ ಅದಕ್ಕೆ ಹೀಗೆ ಆಗ್ತಾ ಇದೆ ಎಂದ . ಸ್ವಲ್ಪ ದಿನದ ನಂತರ "ಲೋ ಪಚ್ಚು ನಿಮ್ಮಪ್ಪಂಗೆ ಇಂಗ್ಲೆಂಡ್ Transfer ಆಯ್ತಾ ?? ಎಂದು ಕೇಳಿದೆ . "ಯಾಕೋ ???" ಎಂದ . ಏನಿಲ್ಲ ನಿನ್ನೆ ರಾತ್ರಿ ನೀನು Brake Dance ಮಾಡ್ತಾ ಇದ್ದೆ ಅದಕ್ಕೆ Doubt ಬಂತು ಎಂದೆನು . ನಿದ್ದೆ !!!!! ಅದರ ಸವಿಯನ್ನು ನಾನು ವರ್ಣಿಸಬೇಕೆ?? ತುರಿಕೆ ಮತ್ತು ನಿದ್ದೆ ಮಾಡಿದಷ್ಟು ಹೆಚ್ಚಾಗುವುದಲ್ಲದೆ ಇನ್ನೂ ಸ್ವಲ್ಪ ಮಾಡಿದರೆ ಹಾಯಾಗಿರುತ್ತದೆ ಎಂದೆನಿಸುತ್ತದೆ . ಎಲ್ಲಾ ದೇವರ ಅನುಗ್ರಹವಿದ್ದವನೊಡನೆ ನಿದ್ರಾದೇವಿ ಮುನಿಸಿಕ...

ನಾನು ನನ್ನ ಸಂಸಾರ

ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ . " ರೀ ... ಇವತ್ತು ಉಪ್ಪಿಟ್ಟು ಮಾಡುತ್ತೇನೆ ... ಅಡುಗೆ ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . "ಏನೋ ..... ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡಿ ಬಿಟ್ಟಿದ್ದೀಯಾ !!!!! ಎಂದು ಎಲ್ರೂ ಕೇಳಿದ್ರು ... ಹೌದು ಮಧ್ಯಾನ್ನ ಹೇಗಿರ್ತೀನಿ ಅಂತ sure ಇಲ್ಲ ಅದಕ್ಕೆ ಈಗಲೇ ಮಾಡಿದೆ ಎಂದೆನು. ಕಳೆದ ಬಾರಿ ನನ್ನವಳ "ಹಸ್ತಗುಣದ" ಬಲಿಪಶುವಾಗಿದ್ದ ರಮೇಶಣ್ಣ ... ಲೋ Insurance Premium ಕಟ್ಟಿದ್ದೀಯ ತಾನೇ ?? ಎಂದು ಕೇಳಿದ . ಹೌದು ಎಂದೆನು . ನನ್ನವಳು ಮನೆಯೊಳಗಿದ್ದರೆ ನನಗೂ ಕೋಟಿ ರುಪಾಯಿ . ಆದರೆ ಅಡುಗೆ ಮನೆ ಹೊಕ್ಕರೆ ಸ್ವಲ್ಪ ಭಯವಾಗುವುದು ಸಹಜ . ಒಹ್ ..... ಕ್ಷಮಿಸಿ ನನ್ನವಳ ಪರಿಚಯ ಮಾಡುವುದೇ ಮರೆತು ಹೋದೆ . ಇವಳ ಹೆಸರು ಸುಶಾಂತಿ . ದೇವರಾಣೆಗೂ ಇದು ಕೇವಲ ಅಂಕಿತನಾಮ . ನನ್ನ ಅತ್ತೆ ಮಾವಂದಿರ ಏಕೈಕ ಪುತ್ರಿ . ಅವರ ಕುಟುಂಬದಲ್ಲಿ ಇವಳ ತಂದೆ ತಾಯಿ ಬಿಟ್ಟು ಬೇರೆ ಎಲ್ಲರಿಗೂ ಗಂಡು ಮಕ್ಕಳು. ಇದರಿಂದಾಗಿ "ಪಾರ್ವತಿಯ " ತರಹ ಇವಳು ಕೂಡ "ಮುದ್ದಿನ ಮನೆಮಗಳು ". " ಆ...

ಶಿರವೆಂಬ ಗುಡಿಯೊಳಗೆ ನೆಲೆಸಿರೋ "ಕೇಶ "ವಾ .....

ಲೋ ಸುಮಂತಾ ...... ತಲೆ ಒಳ್ಳೆ ಮರುಭೂಮಿ ಆಗಿ ಬಿಟ್ಟಿದೆಯಲ್ಲೋ !!!!! ನನ್ನ ಮಾನ ಮರ್ಯಾದೆಯ ಕಿಂಚಿತ್ತೂ ಪರಿವೆ ಇಲ್ಲದಂತೆ ಪಬ್ಲಿಕ್ಕಾಗಿ ನನ್ನ ಗೆಳೆಯ "ಸೈಕ್ ಪೋ " ನನ್ನ ಮಾನವನ್ನು ಬಹಿರಂಗ ಹರಾಜಿಗಿಟ್ಟಾಗ ಏನು ಮಾಡುವುದು ತಿಳಿಯದೆ ತಬ್ಬಿಬ್ಬಾದೆ . ತಕ್ಷಣ ಸುಧಾರಿಸಿಕೊಂಡು " ಹೌದೋ ನನ್ನ ತಲೆಯಲ್ಲಿ ಒಳ್ಳೆ ಬುದ್ಧಿ ತುಂಬಿದೆ ನಿನ್ನ ಥರ ಗೊಬ್ರ ಸಗಣಿ ತುಂಬಿದ್ದರೆ ನನ್ನ ಕೂದಲಿಗೂ ಪೋಷಣೆ ಸಿಕ್ಕಿ ಸೊಂಪಾಗಿ ಬೆಳೆದಿರೋದು" ಅಂಥ ಆವಾಜ್ ಹಾಕಿ ಅವನ ಬಾಯಿ ಮುಚ್ಚಿಸಿದೆ .ಇರಲಿ ಬಿಡಿ ಮೊದಮೊದಲು ಹೀಗೆ ಯಾರಾದರೂ ಹೇಳಿದರೆ ನನಗೆ ಸ್ವಲ್ಪ ಬೇಜಾರಾಗ್ತಿತ್ತು ಈಗ ಅಭ್ಯಾಸ ಆಗಿ ಹೋಗಿ ಬಿಟ್ಟಿದೆ . ಅದೇನೋ ಹೇಳ್ತಾರಲ್ಲ "ದಿನಾ ಸಾಯೋರಿಗೆ ಅಳೋರ್ಯಾರು " ಅಂತ ಹಾಗೇನೆ . ದಿನಾ ಹೋಗೋ ನನ್ನ ಕೂದಲಿಗೆ ಬೇಜಾರ್ ಮಾಡ್ಕೋಳ್ಲೋದಕ್ಕೂ ಸಮಯ ಇಲ್ಲದಾಗಿದೆ . ಮೊನ್ನೆ "ಥಟ್ ಅಂತ ಹೇಳಿ " ನೋಡ್ತಾ ಇದ್ದೆ ಅದರ ನಿರೂಪಕರು "ಪ್ರತಿದಿನ ಮನುಷ್ಯರ 40 ಕೂದಲು ಉದುರುತ್ತದೆ ಹಾಗೆ ಬೆಳೆಯುತ್ತದೆ "ಅಂಥ ಹೇಳಿದ್ರು . ನನ್ನ ವಿಷಯದಲ್ಲಿ ಇದು ಸ್ವಲ್ಪ ಎಡವಟ್ಟಾಗಿದೆ . ಬ್ರಹ್ಮನ Program ನ್ನು testing ಮಾಡದೆ production ಗೆ release ಮಾಡಿರಬೇಕು . ಉದುರೋ ವಿಷಯದಲ್ಲಿ ನಲವತ್ತಕ್ಕೆ ಒಂದು ಹತ್ತು ಸೇರಿಸಿಯೇ ಉದುರುತ್ತದೆ ಆದರೆ ಬೆಳೆಯೋ program ಕೆಲಸ ಮಾಡುತ್ತಿಲ್ಲ . ಇದು ತಪ್ಪಲ್ಲವೇ ??....

ಅಪಾರ್ಥ ಕೋಶ

ಒಂದು 6-7 ವರ್ಷ ಹಿಂದಿನ ಮಾತು . ಅಗತ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದೆ . ಅಪ್ಪನೊಂದಿಗೆ ಬಸವನಗುಡಿ ಬಳಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ರಸ್ತೆ ದಾಟಲು ಕಾಯುತ್ತಿದ್ದೆವು . ಎದುರಿನಿಂದ ಟ್ಯಾಂಕರ್ ಒಂದು ಹೋಯಿತು . ಥಟ್ಟನೆ ನಾನು-ಅಪ್ಪ ಪರಸ್ಪರ ನೋಡಿ ನಕ್ಕೆವು . ಯಾಕೆಂದು ಕೇಳುತ್ತೀರಾ ?? ಏನಿಲ್ಲ ಆ ಟ್ಯಾಂಕರು " ನೀರು ಸರಬುರುಜು ವಾಹನ " ಆಗಿತ್ತು . ( ಅದು ನೀರು ಸರಬರಾಜು ವಾಹನ ಆಗಬೇಕಿತ್ತು ). ಅದರ ಅರ್ಥ ಏನೆಂದು ದೇವರೇ ಬಲ್ಲ . ಮುಂದೆ ಬಸ್ ನಿಲ್ದಾಣದಲ್ಲಿ ನಿಂತಾಗ ಬಸ್ ನ ಬೋರ್ಡ್ ನಲ್ಲಿ "ಕೆ . ಆರ್ ಪೇಟೆ , ಕಂ. ಬ .ನಿ " ಎಂದು ಬರೆದದ್ದು ಓದಿ ನಿಜಕ್ಕೂ ಕಂಬನಿ ಹರಿಯಿತು. (ಅದು ಕೆಂ .ಬ .ನಿ :- ಕೆಂಪೇಗೌಡ ಬಸ್ ನಿಲ್ದಾಣ ಆಗಬೇಕಿತ್ತು ) . ಆ Painter ಗೆ ಸ್ವಲ್ಪ ಕಡಿಮೆ ಹಣ ಕೊಟ್ಟಿರಬೇಕು ಅವನು ಹೀಗೆ ಸೇಡು ತೀರಿಸಿಕೊಂಡಿದ್ದ . ಇದು ಸಣ್ಣ ಅಳತೆಯ ತಪ್ಪುಗಳು "ಅಪಾರ್ಥ " ಅನ್ನುವಂತದ್ದೇನೂ ಇಲ್ಲ . ಭಾರೀ ಅಪಾರ್ಥಕ್ಕೆ ಎಡೆ ಮಾಡುವಂಥ ತಪ್ಪುಗಳನ್ನು ಗಮನಿಸಿದ್ದೇನೆ . ನೆನಪಾದಷ್ಟನ್ನು ಇಲ್ಲಿ ಬರೆದಿದ್ದೇನೆ . ಮೊನ್ನೆ ಸುಭಾಷಿತ ಪುಸ್ತಕ ಅರ್ಥ ( ಅಪಾರ್ಥ ) ಸಮೇತ ಓದುತ್ತಿದ್ದೆ . ಅದರ ಒಂದು ಶ್ಲೋಕ ಮತ್ತು ಅದರ ಅರ್ಥ ಹೀಗೆ ಕೊಟ್ಟಿದ್ದರು . ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ || ಸಾರಾಂಶ : ಎಲ್ಲಿ ನಾರಿಯರು ಪೂಜಿಸುತ್ತಾರೋ...

ಸರಸ -ವಿರಸ

ನಿಮ್ಮ ಹಾಸ್ಯ ನಿಮಗೆ ಅರ್ಥವಾದರೆ ಸಾಕೆ ?? ಜೋಕು ಮಾಡುವ ಗೆಳೆಯ ಒಂದಿನಿತು ಜೋಕೆ || ಹಾಸ್ಯ ಶ್ರೋತೃಗಳಿಗರ್ಥವಾದರೆ ಕ್ಷೇಮ ಅಪಾರ್ಥವಾದರೆ ಗತಿಯು ಕೋದಂಡರಾಮ || ಹಮ್... ಹಾಸ್ಯ ಇದೊಂದು ಬ್ರಹ್ಮಾಸ್ತ್ರ . ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು . ಆದರೆ ಪರಿಣಾಮದಲ್ಲಿ ಇದು ಸ್ನೇಹಕ್ಕೂ ಸೈ ಸಮರಕ್ಕೂ ಜೈ .ಸಂದರ್ಭೋಚಿತ ಹಾಸ್ಯವೂ ಸೃಷ್ಟಿಯಾಗಬಹುದಾದಂತ ಉದ್ವಿಗ್ನ ವಾತಾವರಣವನ್ನು ಕ್ಷಣಮಾತ್ರದಲ್ಲಿ ತಿಳಿಗೊಳಿಸಬಹುದು ಅಂತೆಯೇ ಅಪಾರ್ಥವಾದ ಹಾಸ್ಯವೂ ಸ್ನೇಹದಲ್ಲಿ ಭಾರೀ ಬಿರುಕು ಸೃಷ್ಟಿಸಬಹುದು.ಈಗ ನೀವೇ ನೋಡಿ , call,chat,email,orkut ಎಂದು ಸದಾ ಸಂಪರ್ಕದಲ್ಲಿರುತ್ತಿದ್ದ ನನ್ನ ಕೆಲವು ಗೆಳೆಯರು ನನ್ನ ಹಾಸ್ಯದ ಬಲಿಪಶುಗಳಾಗಿ ಇಂದು ಒಂದು missed call ಕೂಡ ಕೊಡದೆ ಇರುವುದು ಕಹಿ ಸತ್ಯ . ಅದು ಬಿಡಿ ನನ್ನ ಪ್ರೇಮದಲ್ಲಿ ನನ್ನ ಹಾಸ್ಯ ಹೇಗೆ ಹೇಗೆ ಅಡ್ಡಗಾಲಾಯಿತೆಂಬ ದುರಂತ ಕತೆಯನ್ನು ಹಾಸ್ಯದ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ . ಹೌದು .. ನಂಬಿದ್ರೆ ನಂಬಿ ಬಿಟ್ರೆ ಬಿಡಿ , ನಾನೂ love ಮಾಡಿದ್ದೀನಿ . ಒಂದಲ್ಲ ಎರಡು ಬಾರಿ ಮತ್ತೆ ಮೂರನೇ ಬಾರಿ attempt ಕೂಡ ಮಾಡಿದ್ದೆ . ಆದರೆ ಪ್ರಥಮ ದ್ವಿತೀಯ ತೃತೀಯ ಎಲ್ಲ ಚುಂಬನದಲ್ಲೂ ದಂತಭಗ್ನವಾಗಿ " ಹಲ್ಲಿಲ್ಲದ ಸರದಾರನಾಗಿ " ಈಗ ಅಖಿಲ ಭಾರತ ಬ್ರಹ್ಮಚಾರಿಗಳ ಸಂಘ (ರಿ) ದ ಸದಸ್ಯನಾಗಿದ್ದೇನೆ . ಏನು ??? ಏನಾಯ್ತು ಎಂದು ಕೇಳು...

ರಜತ ಪರದೆಯ ಹಿಂದೆ

******ಏನು ?? ....ಏನು ??..... ಏನು ??.....******** (ನನ್ನ ಕುತ್ತಿಗೆ 0-180 degree 3 ಸಲ ತಿರುಗಿದೆ ) ನಾನು ಬರೆದ ಲೇಖನ ನೀವು ಓದುವುದಿಲ್ಲವಾ ?? ಇಷ್ಟು ದಿನ ನನ್ನ ಸ್ನೇಹಿತರಾಗಿದ್ದಕ್ಕೆ ಒಳ್ಳೆ ಪ್ರಶಸ್ತಿ ಸಿಕ್ಕಿತು ..... Tension ತೆಗೊಬೇಡಿ .... ಇದು ಕನ್ನಡ ಧಾರಾವಾಹಿ ನೋಡಿ ಕಲಿತಿದ್ದು ಅಷ್ಟೆ . ಕಲ್ಯಾಣರೇಖೆ ,ಕುಂಕುಮಭಾಗ್ಯ ,ಕಾದಂಬರಿ , ನಾಕುತಂತಿ ,ಶುಭಲಗ್ನ ,ರಂಗೋಲಿ ,ಸುಕನ್ಯಾ ,ಸುಮತಿ ,ಮಾಂಗಲ್ಯ , ಪಾರ್ವತಿ (ನಿಮ್ಮ ಮನೆ ಮಗಳು ), ಗಂಗೋತ್ರಿ ,ಕಸ್ತೂರಿ ನಿವಾಸ..... ಮತ್ತೆ ಕೊನೆಗೆ ಬುಸ್ಸ್ಸ್ ...."ನಾಗಮ್ಮ " .ಇಷ್ಟು ಧಾರಾವಾಹಿಯಲ್ಲಿ ಪ್ರತಿದಿನ ಒಂದೇ ಒಬ್ಬ ನಟ ಅಥವಾ ಒಬ್ಬ ವೀಕ್ಷಕ ಖಂಡಿತ ಸಾಯುತ್ತಾನೆ . ಅದು ಕೊನೆಗೆ Crime Diary ಯಲ್ಲಿ ಬರುತ್ತದೆ . ಹಮ್.... ಶುರು ಮಾಡೋಣ . ಮೊದಲಿಗೆ "Title song ". ಇದು ತುಂಬಾ important . ಇದರ ರಚನೆ ತುಂಬಾ ಸುಲಭ . ಈ ಕೆಳಗಿನ ದೃಶ್ಯಗಳು ಇದ್ದೆ ಇರುತ್ತವೆ . 1) ಒಬ್ಬಳು ಹುಡುಗಿ ಶಾಲು ಹಿಡಿದುಕೊಂಡು ಗದ್ದೆಯಲ್ಲಿ ಓಡುತ್ತಾಳೆ. 2)ಹುಡುಗಿಯು ಮದರಂಗಿ ಹಚ್ಚಿದ ಕೈಯ್ಯಲ್ಲಿ ಹಣತೆ ಆರಿ ಹೋಗುವುದನ್ನು ತಡೆಯುತ್ತಾಳೆ. 3) ಹೋಳಿಯ ದೃಶ್ಯ ಹುಡುಗ ಹುಡುಗಿಗೆ ಪಿಚಕಾರಿ ಹೊಡೆಯುತ್ತಾನೆ . 4) ಹುಡುಗಿಗೆ ಅವಳ ತಾಯಿ ಕಪಾಳಕ್ಕೆ ಬಾರಿಸುತ್ತಾಳೆ. 5)ಕೊನೆಗೆ ಹುಡುಗಿ 32 ಹಲ್ಲು ತೋರಿಸಿ ನಗುತ್ತಾಳೆ ಅದರ ಪಕ್ಕ ಧಾರಾವಾಹಿಯ ಹೆಸರು ಬರ...

ಎಲ್ಲಾರು ಮಾಡುವುದು ಹೊಟ್ಟೆಗಾಗಿ

*********************************ಪುಟಕ್ಕಿಳಿಸುವ ಮುನ್ನ ************************ ನಾನು ಲೇಖಕ - ಕವಿ ಏನೂ ಅಲ್ಲ . ಒಬ್ಬ ಹವ್ಯಾಸಿ ಬರಹಗಾರ ಅಷ್ಟೆ . ಬಹಳಷ್ಟು ಲೇಖನಗಳಲ್ಲಿ "ಸಂಧ್ಯಾಕಾಲ ನೇಸರನು ಅಸ್ತಮಿಸುವಾಗ , ವಸಂತಕಾಲದ ಕೋಗಿಲೆಯ ಕುಹೂ ಕುಹೂ ದನಿಯಲ್ಲಿ ಜನರಿಗೆ ಅದೇನೋ "ಸ್ಪೂರ್ತಿ " ಸಿಗುತ್ತದಂತೆ . ಅದೆಲ್ಲ ನನಗೆ ತಿಳಿಯದು . ಆದರೆ ನಾನು 2nd PUC ನಲ್ಲಿ ಇದ್ದಾಗ ಬರೆದ ಒಂದು ಕವಿತೆ (ನನ್ನ ಬ್ಲಾಗ್ ನಲ್ಲಿ ಮೊದಲನೆ ಕವಿತೆ ) 2 ತಿಂಗಳ ಕಾಲ ಅಜ್ಞಾತವಾಸದಲ್ಲಿತ್ತು. ಕಣ್ತಪ್ಪಿನಿಂದ ಅದನ್ನು ಓದಿದ ನನ್ನ ಅಕ್ಕ ಒಂದು ವೇಳೆ ಅನುನಾಸಿಕ ಪ್ರಯೋಗ ಮಾಡಿದ್ದಲ್ಲಿ ನಾನು ಆ ಕ್ಷಣವೇ ನನ್ನ ಬರವಣಿಗೆಗೆ ಪೂರ್ಣವಿರಾಮ ಇಡುತ್ತಿದ್ದೆ . ಆದರೆ ಅವಳು ತಾನು ಓದಿ ಹೊಗಳಿದ್ದಲ್ಲದೆ ಅಣ್ಣ, ಅಪ್ಪ ಅಮ್ಮ ಎಲ್ಲರಿಗೂ ತೋರಿಸಿದಳು . ಇನ್ನು ನಮ್ಮ ಅಪ್ಪ ...... ನನ್ನ ಆದರ್ಶ ವ್ಯಕ್ತಿ .ಇಂದು ನನ್ನ ಕನ್ನಡಕ್ಕೆ 7/10 ಸಿಕ್ಕಿದರೆ ಅದರಲ್ಲಿ 5 ಅಂಕ ಸೀದಾ ಅಪ್ಪನ Account ಗೆ ಹೋಗುತ್ತದೆ . ಭಾನುವಾರ ಉದಯವಾಣಿ ಸಾಪ್ತಾಹಿಕ ಪುರವಣಿಯ "ಪದಬಂಧ " ಪ್ರತೀವಾರ ಒಟ್ಟಿಗೆ ಕುಳಿತು ಮಾಡುತ್ತಿದ್ದೆವು . ಒಂದು ಚೌಕವೂ ಖಾಲೀ ಉಳಿಯೋಲ್ಲ . ಅವರೋ ನಿಸ್ಸೀಮರು . ನಾನು L - Board . ಒಂದು ಶಬ್ದ ಗೊತ್ತಿಲ್ಲ ಅಂದರೆ ಒಂದು ಪೆಟ್ಟು :) . ಹೀಗೆ ಅವರ ಮುಂದೆ " ಮೆರೆಯುವ " ನಿಟ್ಟಿನಲ್ಲಿ (ಕುಂದಾಪ್ರ ಕನ್ನಡದಲ್ಲ...