Skip to main content

Posts

Showing posts from May, 2009

ಕರ್ಣಕುಂಡಲ

ಸುಮಾರು ಹತ್ತು ತಿಂಗಳು ಹಿಂದಿನ ಮಾತು . ಅಣ್ಣ ಕೊಟ್ಟ ಐಪೋಡನ್ನು ಕಿವಿಗೆ ಸಿಕ್ಕಿಸಿಕೊಂಡು ದೊಡ್ಡ ವೋಲ್ಯುಂ ನಲ್ಲಿ ಹಾಡು ಕೇಳುತ್ತಾ ಆಫೀಸಿಗೆ ತೆರಳುವುದು ನನ್ನ ಅಭ್ಯಾಸ . ಒಂದು ದಿನ ಎಡ ಕಿವಿಯ ಇಯರ್ ಪೋನ್ ನಲ್ಲಿ ಕಡಿಮೆ ಬಲ ಕಿವಿಯಲ್ಲಿ ಹೆಚ್ಚು ವೋಲ್ಯುಂ ಕೇಳಿಸತೊಡಗಿದಾಗ 4000/- ನ ಐಪೋಡ ನ ಮೇಲೆ ಎಳ್ಳಷ್ಟು ಸಂಶಯಪಡದೆ ನನ್ನ ಒಂದು ಕಿವಿ ಸ್ವಲ್ಪ ಡಮಾರ್ ಆಗಿದೆ ಎಂದು ಚಿಂತಿಸುತ್ತಿದ್ದೆ . ಹೇಳಿದರೆ ಕೆಪ್ಪ ಎನ್ನುತ್ತಾರೆ ಎಂದು ಹೆದರಿ ಯಾರಲ್ಲೂ ಹೇಳಿರಲಿಲ್ಲ . ಆಮೇಲೆ ಒಂದು ದಿನ ಅದರಲ್ಲಿ ಹಾಡು ಕೇಳಿದ ನನ್ನ ರೂಂ ಮೇಟ್ ಸುಮಂತ್ .. ಇದರ ಎಡ ಇಯರ್ ಫೋನ್ ಹಾಳಾಗಿದೆ ಅಂದಾಗ ನಾನು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ .ನನ್ನ ಕರ್ಣದ್ವಯಗಳು ಸರಿಯಾಗಿವೆ ಎಂದು ಬೀಗುತ್ತಿದ್ದೆ . ಆದರೆ ಯಾವತ್ತೂ ಗೋಡೆಗೂ ಕಿವಿ ಇರುತ್ತೆ ಎಂದು ತುಂಬಾ ಜಾಗ್ರತೆಯಿಂದ ಇರುತ್ತಿದ್ದ ನನಗೆ ನನ್ನ ಅಕ್ಕಪಕ್ಕ ಎರಡು ಇರುವುದು ಮರೆತೇ ಹೋಗಿತ್ತು . ನಾನು ಹೆಮ್ಮೆ ಪಟ್ಟುಕೊಂಡಿದ್ದು ಅದಕ್ಕೆ ಕೇಳಿಸಿತೋ ಏನೋ. ಈಗೀಗ ಸ್ವಲ್ಪ ನಖರಾ ಮಾಡತೊಡಗಿದೆ. ಸುಮಾರು 15 ದಿನ ಹಿಂದಿನಿಂದ ಈ ಕಿವಿ ನೋವಿ ಶುರು ಆಗಿದೆ. ಮೊದಲಿಗೆ ಇದು ಮಾಮೂಲಿ ಶೀತ ಎಂದುಕೊಂಡು ನಮ್ಮ "ಮಾತ್ರೆ ರಾಜನ " ಬಳಿ ಹೋದೆ .ಮಾತ್ರೆರಾಜ ಹೆಸರು ಯಾಕೆ ಎಂದು ಕೇಳಿದಿರಾ ?? ಏನಿಲ್ಲ ನೀವು ಅವರ clinic ನ ಒಳಗೆ ಹೋಗಿ ಹೊರಬರುವಷ್ಟರಲ್ಲಿ ನಿಮ್ಮ ತೂಕ 1/2kg ಮಾತ್ರೆಗಳಿಂದ ಹೆಚ್ಚಾಗಿರುತ್ತದೆ . ಕಂದು, ಬ

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು