Skip to main content

Posts

Showing posts from January, 2009

ರಜತ ಪರದೆಯ ಹಿಂದೆ

******ಏನು ?? ....ಏನು ??..... ಏನು ??.....******** (ನನ್ನ ಕುತ್ತಿಗೆ 0-180 degree 3 ಸಲ ತಿರುಗಿದೆ ) ನಾನು ಬರೆದ ಲೇಖನ ನೀವು ಓದುವುದಿಲ್ಲವಾ ?? ಇಷ್ಟು ದಿನ ನನ್ನ ಸ್ನೇಹಿತರಾಗಿದ್ದಕ್ಕೆ ಒಳ್ಳೆ ಪ್ರಶಸ್ತಿ ಸಿಕ್ಕಿತು ..... Tension ತೆಗೊಬೇಡಿ .... ಇದು ಕನ್ನಡ ಧಾರಾವಾಹಿ ನೋಡಿ ಕಲಿತಿದ್ದು ಅಷ್ಟೆ . ಕಲ್ಯಾಣರೇಖೆ ,ಕುಂಕುಮಭಾಗ್ಯ ,ಕಾದಂಬರಿ , ನಾಕುತಂತಿ ,ಶುಭಲಗ್ನ ,ರಂಗೋಲಿ ,ಸುಕನ್ಯಾ ,ಸುಮತಿ ,ಮಾಂಗಲ್ಯ , ಪಾರ್ವತಿ (ನಿಮ್ಮ ಮನೆ ಮಗಳು ), ಗಂಗೋತ್ರಿ ,ಕಸ್ತೂರಿ ನಿವಾಸ..... ಮತ್ತೆ ಕೊನೆಗೆ ಬುಸ್ಸ್ಸ್ ...."ನಾಗಮ್ಮ " .ಇಷ್ಟು ಧಾರಾವಾಹಿಯಲ್ಲಿ ಪ್ರತಿದಿನ ಒಂದೇ ಒಬ್ಬ ನಟ ಅಥವಾ ಒಬ್ಬ ವೀಕ್ಷಕ ಖಂಡಿತ ಸಾಯುತ್ತಾನೆ . ಅದು ಕೊನೆಗೆ Crime Diary ಯಲ್ಲಿ ಬರುತ್ತದೆ . ಹಮ್.... ಶುರು ಮಾಡೋಣ . ಮೊದಲಿಗೆ "Title song ". ಇದು ತುಂಬಾ important . ಇದರ ರಚನೆ ತುಂಬಾ ಸುಲಭ . ಈ ಕೆಳಗಿನ ದೃಶ್ಯಗಳು ಇದ್ದೆ ಇರುತ್ತವೆ . 1) ಒಬ್ಬಳು ಹುಡುಗಿ ಶಾಲು ಹಿಡಿದುಕೊಂಡು ಗದ್ದೆಯಲ್ಲಿ ಓಡುತ್ತಾಳೆ. 2)ಹುಡುಗಿಯು ಮದರಂಗಿ ಹಚ್ಚಿದ ಕೈಯ್ಯಲ್ಲಿ ಹಣತೆ ಆರಿ ಹೋಗುವುದನ್ನು ತಡೆಯುತ್ತಾಳೆ. 3) ಹೋಳಿಯ ದೃಶ್ಯ ಹುಡುಗ ಹುಡುಗಿಗೆ ಪಿಚಕಾರಿ ಹೊಡೆಯುತ್ತಾನೆ . 4) ಹುಡುಗಿಗೆ ಅವಳ ತಾಯಿ ಕಪಾಳಕ್ಕೆ ಬಾರಿಸುತ್ತಾಳೆ. 5)ಕೊನೆಗೆ ಹುಡುಗಿ 32 ಹಲ್ಲು ತೋರಿಸಿ ನಗುತ್ತಾಳೆ ಅದರ ಪಕ್ಕ ಧಾರಾವಾಹಿಯ ಹೆಸರು ಬರ

ಎಲ್ಲಾರು ಮಾಡುವುದು ಹೊಟ್ಟೆಗಾಗಿ

*********************************ಪುಟಕ್ಕಿಳಿಸುವ ಮುನ್ನ ************************ ನಾನು ಲೇಖಕ - ಕವಿ ಏನೂ ಅಲ್ಲ . ಒಬ್ಬ ಹವ್ಯಾಸಿ ಬರಹಗಾರ ಅಷ್ಟೆ . ಬಹಳಷ್ಟು ಲೇಖನಗಳಲ್ಲಿ "ಸಂಧ್ಯಾಕಾಲ ನೇಸರನು ಅಸ್ತಮಿಸುವಾಗ , ವಸಂತಕಾಲದ ಕೋಗಿಲೆಯ ಕುಹೂ ಕುಹೂ ದನಿಯಲ್ಲಿ ಜನರಿಗೆ ಅದೇನೋ "ಸ್ಪೂರ್ತಿ " ಸಿಗುತ್ತದಂತೆ . ಅದೆಲ್ಲ ನನಗೆ ತಿಳಿಯದು . ಆದರೆ ನಾನು 2nd PUC ನಲ್ಲಿ ಇದ್ದಾಗ ಬರೆದ ಒಂದು ಕವಿತೆ (ನನ್ನ ಬ್ಲಾಗ್ ನಲ್ಲಿ ಮೊದಲನೆ ಕವಿತೆ ) 2 ತಿಂಗಳ ಕಾಲ ಅಜ್ಞಾತವಾಸದಲ್ಲಿತ್ತು. ಕಣ್ತಪ್ಪಿನಿಂದ ಅದನ್ನು ಓದಿದ ನನ್ನ ಅಕ್ಕ ಒಂದು ವೇಳೆ ಅನುನಾಸಿಕ ಪ್ರಯೋಗ ಮಾಡಿದ್ದಲ್ಲಿ ನಾನು ಆ ಕ್ಷಣವೇ ನನ್ನ ಬರವಣಿಗೆಗೆ ಪೂರ್ಣವಿರಾಮ ಇಡುತ್ತಿದ್ದೆ . ಆದರೆ ಅವಳು ತಾನು ಓದಿ ಹೊಗಳಿದ್ದಲ್ಲದೆ ಅಣ್ಣ, ಅಪ್ಪ ಅಮ್ಮ ಎಲ್ಲರಿಗೂ ತೋರಿಸಿದಳು . ಇನ್ನು ನಮ್ಮ ಅಪ್ಪ ...... ನನ್ನ ಆದರ್ಶ ವ್ಯಕ್ತಿ .ಇಂದು ನನ್ನ ಕನ್ನಡಕ್ಕೆ 7/10 ಸಿಕ್ಕಿದರೆ ಅದರಲ್ಲಿ 5 ಅಂಕ ಸೀದಾ ಅಪ್ಪನ Account ಗೆ ಹೋಗುತ್ತದೆ . ಭಾನುವಾರ ಉದಯವಾಣಿ ಸಾಪ್ತಾಹಿಕ ಪುರವಣಿಯ "ಪದಬಂಧ " ಪ್ರತೀವಾರ ಒಟ್ಟಿಗೆ ಕುಳಿತು ಮಾಡುತ್ತಿದ್ದೆವು . ಒಂದು ಚೌಕವೂ ಖಾಲೀ ಉಳಿಯೋಲ್ಲ . ಅವರೋ ನಿಸ್ಸೀಮರು . ನಾನು L - Board . ಒಂದು ಶಬ್ದ ಗೊತ್ತಿಲ್ಲ ಅಂದರೆ ಒಂದು ಪೆಟ್ಟು :) . ಹೀಗೆ ಅವರ ಮುಂದೆ " ಮೆರೆಯುವ " ನಿಟ್ಟಿನಲ್ಲಿ (ಕುಂದಾಪ್ರ ಕನ್ನಡದಲ್ಲ