Skip to main content

Posts

Showing posts from 2010

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು. 2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು. 3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು. 4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು. 5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ

WELCOME TO KUNDAPUR !!!!!! - PART-III

"ಹ್ಜಬ್ದ್ಸ್ಕ್ಫ಼್ಜಒಇಗ್ತಿಎಬ್ಗ್ಕ್ಜ್ಬ್ದ್ವ್ವಿಹ್ಗಿದ್ಕ್ವ್ಶ್ದ್ಪ್ಫ಼್ವೆಒಗ್ [ ವ್ಪೆಗ್ಸ್ದ್ಜ್ಗ್ವ್೦ಗ್ [ ವ್ಜ್ಗ್ಸ್ದ್ಬ್ಲ್ವ್ [ ಒಸ್ರ್ಗ್" ಏನು ?? ಅರ್ಥ ಆಗಲಿಲ್ವಾ ?? ಸಂತೆಯ ಗೌಜಿ ಮಾರಾಯ್ರೆ ... ನನಗೂ ಸರಿಯಾಗಿ ಕೇಳಿಸುತ್ತಿಲ್ಲ . ಸ್ವಲ್ಪ ಹತ್ತಿರ ಹೋಗಿ ಕೇಳುವುದು ಒಳ್ಳೆಯದು . ಆಮೇಲೆ ಪಕ್ಕದಲ್ಲಿ ಕುಂಬಳಕಾಯಿ ಮಾರುತ್ತಿರುವವನ ಬೆಲೆ ಕೇಳಿ ಸೇಬು ಮಾರುವವನ ಹತ್ತಿರ ಬಂದು " ಎಂತದು ??? ಈಗ ಎಂಟು ರುಪಾಯಿ ಕಿಲೋ ಅಂತ ಬೊಬ್ಬೆ ಹಾಕಿದ್ರಿ " ಎಂದೆಲ್ಲ ಹೇಳಿದರೆ ಧರ್ಮದೇಟು ಬೀಳುವುದು ಖಂಡಿತ . " ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕಂಜಿದೊದೆಂತಯ್ಯ " ಎಂದು ದಾಸರು ಬರೆಯುವಾಗ ಅವರು  ಕುಂದಾಪುರದಲ್ಲೇ ಇದ್ದರೆಂದು ಕಾಣುತ್ತದೆ . ಸಂತೆಯೊಳಗೆ ಯಶಸ್ವಿಯಾಗಿ ವ್ಯಾಪಾರ ಮಾಡಿ ಬಂದರೆ ಅವನು ಅರಿಯದೆ ಒಂದು ಅವಧಾನ ಕಾರ್ಯಕ್ರಮ ಮಾಡಿ ಬಂದಂತೆ Photo courtesy : http://www.flickr.com/photos/palachandra/sets/72157622395311690/ ನೀವೇ ನೋಡಿ . ಒಂದು ವೇಳೆ ನಿಮಗೆ ಸೌತೇಕಾಯಿ ತೆಗೆದುಕೊಳ್ಳಬೇಕೆಂದುಕೊಳ್ಳಿ ............. ನಿಮ್ಮದು ಒಂದೇ ಪ್ರಶ್ನೆ .... ಹೋಯ್ ಸೌತೇಕಾಯ್ ಹೇಂಗ್ ಮಾರ್ರೆ .............. ಉತ್ತರಗಳು --- ಅಲ್ಲ ಲೋರಿ ಅನ್ ಲೋಡ್ ಆತಿತ್ತ ಮಾರ್ರೆ ........ ಕಳ್ಸಿ ಕೊಡ್ತೆ ...  ( ಭಟ್ಕಳದಿಂದ ಬಂದ ಬಟಾಟೆ ವ್ಯಾಪಾರಿ ಮೊಬೈಲಿನಲ್ಲಿ ) ಮುಂದಿನ್ ವಾರ ಕೊಡ್

WELCOME TO KUNDAPUR !!!!!! - PART-II

ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ || ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ || ಮನೆಗೆ ತಲುಪಿದೊಡನೆ ಅಮ್ಮ-ಅಪ್ಪನೊಂದಿಗೆ ಮೊದಲ ಸುತ್ತಿನ ಸೆಂಟಿಮೆಂಟುಗಳು ಮುಗಿದ ಮೇಲೆ ಒಮ್ಮೆ ಹೊರಬಂದು ಪ್ರಾತಃಕಾಲದ ಕುಂದಾಪುರ ದರ್ಶನ   ಮಾಡಿ ಬಂದೆನು. ಆ ದರ್ಶನದ ರನ್ನಿಂಗ್ ಕಾಮೆಂಟರಿ......... " ಪೆಟ್ರೋಲ್ ಬಂಕ್ ನಲ್ಲಿ ಟವೆಲ್ ಉಟ್ಟು ಬಸ್ ತೊಳೆಯುತ್ತಿರುವ ಕ್ಲೀನರ್ , ಅಶ್ವಥ್ಥ ಮರಕ್ಕೆ ಸುತ್ತು ಹಾಕುತ್ತಿರುವ ಜನರೇಶನ್ 3 , ನಡೆದು ಬಾರಯ್ಯಾ ssss ಭವಕಡಲಿಗೇ sss s ಪ್ರತಿದಿನ ಇದನ್ನೇ ಹಾಡುವ ಬೊಬ್ಬರ್ಯ ಕಟ್ಟೆಯ ಕ್ಯಾಸೆಟ್ಟು , ಹತ್ತಿದ ಸೈಕಲ್ಲನ್ನು ನಿಲ್ಲಿಸದೇ.... ನೆಲಕ್ಕೆ ಕಾಲು ತಾಗಿಸದೇ ಮನೆಯ ಬಾಗಿಲ ಬುಡಕ್ಕೇ ಪೇಪರ್ ಎಸೆಯುವ ಶಾರ್ಪ್ ಶೂಟರ್ ಪೇಪರಿನವನು , ಶಾಸ್ತ್ರಿ ಪಾರ್ಕಿನಲ್ಲಿ ಮುಂಜಾನೆ ಭಟ್ಕಳ ಬೆಂಗಳೂರಿನಿಂದ ಬಂದ ಹೂವಿಗೆ ನೀರು ಚಿಮುಕಿಸುತ್ತಿರುವ ಹೂವಿನ ವ್ಯಾಪಾರಿಗಳು , ಬಿಕೋ ಎನ್ನುತ್ತಿರುವ ರೋಡು ಹಾಗೂ ಅಂಗಡಿಯಲ್ಲಿ ಕೂತಿರುವ ನನ್ನ ಡ್ಯಾಡು. ಇಷ್ಟೇ." ಒಂದು ನಾಲ್ಕೈದು ವರ್ಷಗಳ ನಂತರ ಕುಂದಾಪುರಕ್ಕೆ ಯಾರಾದರೂ ಬಂದರೆ ಒಂದು ಬಾರಿ ತಾನು ಯಾವ ಊರಿಗೆ ಬಂದೆ ಎಂದು ಬೆಚ್ಚಿ ಬೀಳುವುದು ಸಹಜ. ಶಾಸ್ತ್ರಿ ಪಾರ್ಕಿನ ಮಧ್ಯ ಕದಲದೇ ನಿಂತಿರುವ ಶಾಸ್ತ್ರಿಗಳೊಬ್ಬರೇ ಈ ಎಲ್ಲಾ ಬದಲಾವಣೆಗಳಿಗೆ ಮೂಕ ಸಾಕ್ಷಿ. ಎಲ್ಲಿಯವರೆಗೆಂದರೆ ಶ್ರೀ ಬೊಬ್ಬರ್ಯನವರು ಕೂಡಾ ಹೊಸ RCC ಮನೆ ಕಟ್ಟಿಕೊಂಡಿದ್ದಾರೆ.

WELCOME TO KUNDAPUR !!!!!! .

********************************************************************************* ಕೋಟೇಶ್ವರ ಕುಂಭಕಾಶಿ ಕೋಟ ಕೋಡಿ ಕೋಣಿ ನಮ್ಮ ಊರು ಕುಂದಾಪ್ರ ಎಷ್ಟು ಚಂದ ಕಾಣಿ ಹೊಯ್ಕ ಬರ್ಕ್ ಭಾಷೆ ಕೇಂಡ್ರೆ ಕಿಮಿಗೆಷ್ಟ ಖುಶಿ ಅರ್ಥ ಆಗದಿದ್ರೆ ಮಾಡ್ಕಬೇಡಿ ಮಂಡೆಬಿಶಿ || ಹೋಯ್ ಹೇಂಗಿದ್ರಿ ಮಾರ್ರೆ ??? ಬನಿ ಕೂಕಣಿ ..... ಉಂಡ್ರಿಯಾ ?? ಒಂದೈದ್ನಿಮಿಷ ಅಡ್ಡ ಒರಗಿ ... ದಣು ಹೊಯ್ಲಿ   ಆಮೇಲೆ ನಾನ ಚೊರೆ ಮಾಡುಕ್ಕೆ ಶುರು ಮಾಡ್ತೆ ಅಕಾ ?? ಅಲ್ದೆ ಕುಂದಾಪುರದ್ ವಿಷಯ ಬರುದ್ ಅಂದ್ರೆ ಸಾನ್ ಸುಮಾರಾ   ?? ಎಂತಿಲ್ಲ ಅಂದ್ರೂ ಒಂದೆರಡ್ ಒಪ್ಪತ್ತಾರೂ ಬೇಕಾ ಬೇಡ್ದಾ ?? ಕಾಣಿ ..... ಆ ಬೋರ್ಡ್ ಸಮಾ ಕಾಣಿ ಖುಶಿ ಆತ್ತಾ ಇಲ್ದಾ ?? " ನಮ್ಮೂರೇ ನಮಗೆ ಸವಿಬೆಲ್ಲ " ಅಂದ ಹಾಂಗೆ ಯಾರಿಗೇ ಆಯ್ಲಿ ಅವರ ಊರಿನ ಬೋರ್ಡ್ , ಊರಿಗೆ ಹೋಪು ಬಸ್ಸ ಕಂಡ್ರೆ   ಅಷ್ಟೆಲ್ಲ ಎಂತಕ್ಕೆ ದೊಡ್ಡ ದರೋಡೆ ಆಯಿತ್ತ ಅಂತ ಹೇಳಿ ಉದಯ ವಾರ್ತೆಯಲ್ಲಿ ನಮ್ಮೂರಿನ ಒಂದ್ ಓಣಿ ತೋರ್ಸಿದ್ರೂ ಆ ಬೇಜಾರಿನ್ ಮಧ್ಯಾನೂ ಸ್ವಲ್ಪ ಖುಷಿ ಆಯಿಯೇ ಆತ್ತ . ಊರಲ್ಲಿಪ್ಪತ್ತಿಗೆ ಮೇಳಿ ತಿರ್ಸಿ ಕಾಣ್ದಿರೂ ಬೇರೆ ಊರಿಗೆ ಹೋದಾಗಳಿಕೆ ನಮ್ಮೂರಿನ ಜನ್ರನ್ನ ಕಂಡ್ರೆ ಒಂದ್ ಥರಾ ಮನ್ಸಿಗೆ ಸಮಾಧಾನ . " ನಮ್ ಜನ " ಎಂಬ ಪ್ರೀತಿ ಬಳ್ಕಂಡ ಬ