Thursday, November 4, 2010

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು.

2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು.

3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು.

4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು.

5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ ಮಾಡಿದೆನೆಂದು ಅರಿವಾಗಿ ತಕ್ಷಣವೇ "SORRY"  ಎಂದನು.

6)ಅಮೇರಿಕಾದಿಂದ ಊರಿಗೆ ರಜಾದಿನದಲ್ಲಿ ಅಜ್ಜಿ ಮನೆಗೆ ಬಂದ ಪುಟ್ಟ ಅಜ್ಜಿಯನ್ನು ತುಂಬಾ ಹಚ್ಚಿಕೊಂಡು ವಾಪಾಸು ಹೋಗುವಾಗ "ಅಜ್ಜಿ ನೀನು ಆರ್ಕುಟ್ ನಲ್ಲಿ ಇದ್ದೀಯಾ ?? ಎಂದು ಕೇಳಿದನು.

7)ಸುದೃಢ ಸಮ್ಮಿಶ್ರ ಸರ್ಕಾರಕ್ಕೆ ಒಂದು ಉದಾಹರಣೆ ಕೊಡಿ ಎಂದಾಗ "ಸಾರ್ ಮೊನ್ನೆಯ ತೊವ್ವೆ ನಿನ್ನೆಯ ರಸಮ್ ಬೆಳಿಗ್ಗೆಯ ಚಟ್ನಿಗಳ ಮೈತ್ರಿಯಿಂದ ಆಗಿರುವ ನಮ್ಮಮ್ಮನ ಸಾಂಬಾರ್" ಎಂದೆನು.

8)ಚಿಕ್ಕ ಮಗು ಅರ್ಥವಾಗದು ಎಂದುಕೊಂಡು "ನೋಡು ಪುಟ್ಟಾ.. ಈ ಚೀಟಿಯಲ್ಲಿ ಒಂದು ಸುಳಿವು ಇದೆ ಅದನ್ನು ಅರ್ಥ ಮಾಡಿಕೊಂಡು ಆ ಸ್ಥಳಕ್ಕೆ ಹೋದರೆ ಅಲ್ಲಿ ಇನ್ನೊಂದು ಸುಳಿವು ಸಿಗುತ್ತದೆ ಹೀಗೆ ಕೊನೆಯವರೆ ಹೋದರೆ ನಿನಗೆ ಬಹುಮಾನ ಎಂದು ನಿರ್ವಾಹಕ ಹೇಳಿದಾಗ... ಒಹ್!! Treasure Hunt ಅಲ್ವಾ ?? ಸರಿ ಅಂಕಲ್ ಎಂದು ಪುಟ್ಟ ಮುನ್ನಡೆದ.

9) "ಚಾಲಕನ ಹಿಂದಿನ ನಾಲ್ಕು ಸೀಟುಗಳು ಮಹಿಳೆಯರಿಗೆ ಮೀಸಲು" ಬರೆದದ್ದನ್ನು ಓದಿ ಅಲ್ಲೇ ಸೀಟಿನ ಕೆಳಗೆ ಕ್ಲೀನರ್ ಇಟ್ಟಿದ್ದ ನೀರಿನ ಬಾಲ್ದಿ ಮತ್ತು ಚೆಂಬನ್ನು ನೋಡಿ ಕುಂದಾಪುರದ ಕಣ್ಮಣಿ ಹೌಹಾರಿದನು. ( ಕುಂದಾಪುರ ಕನ್ನಡದಲ್ಲಿ ಮೀಸಲು ಎಂದರೆ ಸ್ನಾನ ಮಾಡಿಸಲು ಎಂದರ್ಥ  )

10)ನಿದ್ದೆಗೆಟ್ಟು ಊಟ ಬಿಟ್ಟು ಹಗಲಿರುಳೂ ಕಷ್ಟಪಟ್ಟು ಮಹಾವಿಜ್ಞಾನಿಯು seedless ನೆಲಗಡಲೆಯನ್ನು ಕಂಡುಹಿಡಿದನು.

==========================================ವಿಕಟಕವಿ ========================

8 comments:

ಜ್ಯೋತಿ said...

Super :-)

PARAANJAPE K.N. said...

ಎಲ್ಲೋಗಿದ್ರಿ ಮಾರಾಯ್ರೇ ಇಷ್ಟು ದಿವ್ಸ, ಪಟಾಕಿ ಜೋರಾಗಿದೆ. ಮುಂದುವರಿಸಿ, ಬಿಡಬೇಡಿ

ಸಂದೀಪ್ ಕಾಮತ್ said...

Superb dude!

Anonymous said...

As usual super guruve...

inti,
follower of u r blog

Sumantha Shanubhag V said...

Thanks you all

yours sincerely
Sumanth

ಸೀತಾರಾಮ. ಕೆ. / SITARAM.K said...

ಪಟಾಕಿ ಜೋರಾಗಿದೆ. ನಕ್ಕು ನಕ್ಕು ಸಾಕಾಯ್ತು.

ಶಿವಪ್ರಕಾಶ್ said...

very funny :)

Vijendra Lakshmana Rao said...

Nice one bro!!