Skip to main content

Posts

Showing posts from 2011

ನೋಡಿ ಸ್ವಾಮೀ ನಾವಿರೋದೇ ಹೀಗೆ

======================================== ನೋಡೀ... ಸ್ವಾಮೀ.... ನಾವಿರೋದೆ ಹೀಗೆ ======================================== ನಾನು ಯಾರು ? ಹೇಗೆ ? ಯಾಕೆ ?? ನೂರು ಪ್ರಶ್ನೆ ಎಸೆದೆ ಬಂದ ಉತ್ತರಗಳ ಕೂಡಿ ಕವನವೊಂದ ಹೊಸೆದೆ| ಬರೆಯುತಿರುವೆ ಈ ಕವನದಿ ನಾನು ನನ್ನ ಬಗ್ಗೆ ನೋಡೀ... ಸ್ವಾಮೀ.... ನಾವಿರೋದೆ ಹೀಗೆ|| ಎಂಜಿನಿಯರಿಂಗ್ ಓದಿ ಟೀಸಿಯೆಸ್ಸಿನಲ್ಲಿ ದುಡಿಮೆ ಕೃಷ್ಣವರ್ಣ ತಲೆಯ ಮೇಲೆ ಕೂದ್ಲು ಸ್ವಲ್ಪ ಕಡಿಮೆ ಕುಂದಾಪುರದವನು ಇರುವೆ ಬೆಂಗಳೂರಿನಾಗೆ ಹೋಯ್ ಮಾರಾಯ್ರೆ... ನಾವಿಪ್ಪುದೇ ಹೀಂಗೆ!! ಇಹುದು ನನಗೆ ಕವಿತೆ ಕವನ ಬರೆಯುವಂತ ಹುಚ್ಚು ಮೌನ ಕೂಡಿ ಬರದು ನನಗೆ ಮಾತು ಸ್ವಲ್ಪ ಹೆಚ್ಚು ಮನದ ಮಾತ ಹಾಕಿ ಬಿಡುವೆ ಪೇಪರಲ್ಲಿ ಗೀಚಿ ಪಳೆಯಾಚಿ ಮಾಮ್ಮಾ... ಹಾವೆ ಆಸುಚೆ ಅಶೀಚಿ ಇಡ್ಲಿ ಚಟ್ನಿ ದೋಸೆಯಂತು ನನ್ನ ಫೇವರಿಟ್ಟು ಊರು ಬಿಟ್ಟು ಓಡಿ ಬಿಡುವೆ ಕಂಡರೆ ಉಪ್ಪಿಟ್ಟು ಬ್ರೆಡ್ಡು ಬನ್ನು ಆಗೋದಿಲ್ಲ ಇಷ್ಟ ಪೂರಿ - ಬಾಜಿ देखिये... मै ऐसाहि हू माजि.....॥ ಬೇಳೆ ಸಾರು ಹಪ್ಪಳವಿರೆ ಅದುವೇ ಮೃಷ್ಟಾನ್ನ ಉಪ್ಪಿನಕಾಯ್ ಮಜ್ಜಿಗೆಯಿರಲೂಟವೆಷ್ಟು ಚೆನ್ನ! ಆಲೂಗಡ್ಡೆ ಪರಮಮಿತ್ರ ಇಷ್ಟ ಬಸಳೆ ನುಗ್ಗೆ ನೋಡೀ... ಸ್ವಾಮೀ.... ನಾವಿರೋದೆ ಹೀಗೆ ಚಾಕಲೇಟು ಬರ್ಫಿ ನೋಡೆ ಇರುವೆಯಾಗಿ ಬಿಡುವೆ ಜಾಮೂನನು ತಂದವರಿಗೆ ಒಲಿದು ವರವ ಕೊಡುವೆ ಹಣ್ಣಿನಲ್ಲಿ ಇಷ್ಟವೆನಗೆ ಮಾವ

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ  ರೊಟ್ಟಿಯಿಂದ ಶುರುಮಾಡಿ ಉಪ್ಪು ತುಪ್ಪ ಸೊಪ್ಪು ಎಲ್ಲವನ್ನೂ ಸರಿಯಾಗಿ ಹಾಕಿಕ