Skip to main content

Posts

Showing posts from November, 2008

ಮುಂಬೈಯೊಳಗೊಂದು ಮನೆಯ ಮಾಡಿ ರೈಲಿಗಂಜಿದೊಡೆಂತಯ್ಯಾ ????

********** "Platform ಕ್ರಮಾಂಕ್ ಚಾರ್ ವರ್ ಆಲೇಲಿ ಲೋಕಲ್ ಆಟ್ ವಾಜ್ಹೂನ್ ಇಕುನ್ ಚಾಲಿಸ್ ಮಿನಿಟಾಂಚಿ ಹಾರ್ಬರ್ ಲೈನ್ ವರೂನ್ ಶಿವಾಜಿ ಟರ್ಮಿನಸ್ ಲಾ ಜ್ಹಾಣಾರಿ ಧೀಮಿ ಲೋಕಲ್ ಆಹೇ " --------------7:30 ಕ್ಕೆ ರೈಲ್ವೆ ಸ್ಟೇಶನ್ ನಲ್ಲಿದ್ದ ನಾನು ಬಿಕೋ ಎನ್ನುತ್ತಿದ್ದ ಸ್ಟೇಷನ್ನನ್ನು ನೋಡಿ ,ಅಬ್ಬಾ.... ಇಂದಾದರೂ ಸುಖವಾಗಿ ಕುಳಿತು ಹೋಗಬಹುದು ಎಂದು ಮನಸ್ಸಿನ ಮಂಡಿಗೆ ತಿನ್ನುತ್ತಿದ್ದೆ . ಆದರೆ .... ಎಲ್ಲಿ ? ಏನು ?ಹೇಗೆ? ಎತ್ತ ? ತಿಳಿಯದು ರೈಲಿನ ಆಗಮನಕ್ಕೆ 2 ನಿಮಿಷ ಮೊದಲು ಇರುವ 10 ದಿಕ್ಕು ಸಾಲದೇ ಇನ್ನೆರಡು extra ದಿಕ್ಕುಗಳನ್ನು ಸೃಷ್ಠಿಸಿಕೊಂಡು ಜನಪ್ರವಾಹ ಹರಿದು ರೈಲಿನಲ್ಲಿ ಬಿಡಿ platform ನಲ್ಲೂ ನಿಲ್ಲಲು ಜಾಗ ಇಲ್ಲದಾಯಿತು . " ಹ್ಹಾ .... ಚಲಾ .... " " ಉತರ್ಕೆ ಚಡೋ ಭಾಯಿ" ಕೂಗು. Engineering college ,love ಮತ್ತು local train ಈ ಮೂರು ವಿಷಯಗಳಲ್ಲಿ common ಏನೆಂದರೆ ಒಳಗಿರುವವರು ಹೊರಗೆ ಬಂದರೆ ಸಾಕೆಂದುಕೊಂಡರೆ ಹೊರಗಿರುವವರು ಒಳಗೆ ಸೇರುವ ತವಕದಿಂದಿರುತ್ತಾರೆ . Mechanical ನಲ್ಲಿ Engineering ಮಾಡಿರುವ ನಾನು Ph.D ಗಾಗಿ “Physical analytical psychological and logical study on Mubai-Local trains and the crowd,Arrival-Departure timings,Handling the crowd, Tragedies included and strategies to get