ಕೇಳಿದಳು ಕನಸಿನಲಿ ಕತ್ರಿನಾ ಕೈಫು
ಆಗಲೇ ಸುಮಂತಾ ನಾ ನಿನ್ನ ವೈಫು
ಹೇಳಿದೆನು ನೀನೊಂದು ಕೆಲಸವನು ಮಾಡು
ಮನೆ ಮುಂದೆ ನಿಂತಿರುವ ಕ್ಯೂವನ್ನು ನೊಡು||
ಸೈಫ ಅಲಿ ಖಾನಲ್ಲಿ ಇಲ್ಲವೊ ದಮ್ಮು
ನನ್ನವನಾಗೋ ಓ ನನ್ನ ಸುಮ್ಮು!!!!
ಬೇಡುತ್ತ ನಿಂತಿಹಳು ನೋಡು ಕರೀನಾ
ಬಕರಾ ಆಗಲು ನಾನೇನು ಕುರಿ ನಾ ??
ಬಹುಕಾಲದಿಂದ ನಾ ಮೆಚ್ಚಿಹೆನು ನಿನ್ನ
ತಪ್ಪು ಮಾಡಿದೆ ವರಿಸಿ ಸಣ್ಣ ’ಬಚ್ಚಾ’ನನ್ನ ( SMALL ' B' )
ಓಡಿ ಬರುವೆ ನಾ ಹಿಡಿದು ನಿನ್ನ ಕೈ
ತುದಿಗಾಲ ಮೇಲಿಹಳು ಐಶ್ವರ್ಯ ರೈ||
ನಮ್ಮೂರ ಗಂಡಿವನು ನನಗೆ ಪ್ರಿಫರೆನ್ಸು
ಕ್ವೀನು ನಾನು ನೀನೇ ನನ್ನ ಪ್ರಿನ್ಸು
ಇಲ್ಲ ಅಂದರೆ ನಿನಗೆ ನನ್ನ ಮೇಲಾಣೆ
ಹಕ್ಕು ಚಲಾಯಿಸುತ್ತಿಹಳು ಪಡುಕೋಣೆ||
ಸೌತ್ ಇಂಡಿಯನ್ನರದ್ದು ಸಪರೇಟು ಸಾಲು
ನಾನೇ ಬೇಕೆಂದು ಎಲ್ಲರದು ಗೋಳು
ಒಲ್ಲೆನೆಂದರೆ ನಾನು ಕುಡಿಯುವೆನು ವಿಷ
ಎಂದು ಬೆದರಿಸುತ್ತಿದ್ದಾಳೆ ತ್ರಿಷಾ
ಜಾನ್ ಹೈ ತು ಎನ್ನುತ್ತಾಳೆ ಜೆನಿಲಿಯಾ
ಛತ್ರ 'ಪತಿ' ಯಾಗೋ ಎಂದೆನುವ ಶ್ರೀಯಾ
ನನ್ನೊಳಗೆ ನೀನು ನಿನ್ನೊಳಗೆ ನಾನು
ಲಲ್ಲೆಗರೆಯುತ್ತಿರುವಳು ಆಸೀನು||
ಬಿಪಾಷಾ ಮಲ್ಲಿಕಾರನ್ನು ಮಾಡಿದೆ ಅವೈಡು
ರಾಖೀ ಸಾವಂತು ಡಿಸ್ ಕ್ವಾಲಿಫೈಡು
ಬೋಲ್ಡು ಮಾಡಲು ಎಸೆದಿಹಳು ಬಾಲನ್ನು ವಿದ್ಯಾ
ಪ್ರಿಯಾಂಕ ಬರೆದು ಕಳಿಸಿರುವಳು ಪ್ರೇಮ ಪದ್ಯ ||
ಓದಿ ಕವನವ ಶಾಂತಿಗೆ ನೆತ್ತಿಗೇರಿತು ಪಿತ್ತ
ಹುಡುಕಿದಳು ಸೌಟು-ಲಟ್ಟಣಿಗೆ-ಬೆತ್ತ
ಭಯದಿಂದ ನಾ ಮಂಚದಿಂದಡಿಗೆ ಬಿದ್ದೆ
ಕನಸು ಮುರಿದು ನಾ ನಿದ್ದೆಯಿಂದೆದ್ದೆ !!!
============================ವಿಕಟಕವಿ ==================================
Comments
ಇದು ಈಗಿನ ಕಾಲದ "ಬಾರೇ ರಾಜಕುಮಾರಿ..ಹೋಗೋಣ ಜಂಬೂ ಸವಾರಿ" !
ನಿಮ್ಮ ಪ್ರತಿಕ್ರಿಯೆ ಓದಿ ಅಟ್ಟ ಏರಿ ಕುಳಿತೆ .
ತುಂಬಾ ಧನ್ಯವಾದಗಳು
ಸುಮಂತ್
ishta aytu.
rgds-sindhu
sumanth
ಕವನ ಓದಿ ಭಾಳಾ ಖುಶಿ ಆಯ್ತು.
-Pavan