ಭೋಗ ಷಟ್ಪದಿಯಲ್ಲಿ ರಚಿತವಾದ ಈ ಷಟ್ಪದಿಗಳು ದಿನಾಂಕ 07/02/2010 ರ ವಿಜಯಕರ್ನಾಟಕದಲ್ಲಿ ( ಶ್ರೀವತ್ಸ ಜೋಷಿಯವರ " ಪರಾಗಸ್ಪರ್ಶ " ಅಂಕಣದಲ್ಲಿ ) ಪ್ರಕಟಿತ .
============================================================
====================================== ಆಲು ಬೆಲೆಯು ಗಗನದಲ್ಲಿ
ಪಾಲಕಂತು ಮುಟ್ಟಲಾರೆ
========================================== ====================================================== ====================== ವಿಕಟಕವಿ ==================
ಏರುಪೇರು ಭರತವಿಳಿತ
ಜಾರುಬಂಡಿ ಮೆಟ್ಟಿಲಾಟ
ಷೇರುಮಾರುಕಟ್ಟೆಯೊಳಗಿದೆಷ್ಟು ಗೊಂದಲ
ಬಾರು-ಬೀರಿನಂತೆ ನೀವು
ಷೇರುದಾಸನಾದರಂಡ್ರ
ವೇರಿನಲ್ಲಿ ಬರುವ ದಿನವು ದೂರವುಳಿಯದು
====================================================
ಭೋಗದಲ್ಲಿ ಬರೆದೆ ಎಂದು
ಬೀಗುತಿರುವ ನೀನು ಹೀರೊ
ಆಗಬೇಡವೆಂದು ಗೆಳೆಯ ಟಾಂಟು ಹೊಡೆದನು
ಯೋಗ ನೆಟ್ಟಗಿದ್ದು ಪ್ರಕಟ
ವಾಗಿಬಿಟ್ಟರೆನ್ನ ಕವನ
ಬೀಗ ಜಡಿದು ಬಿಡುವೆ ನೋಡಿರವನ ಬಾಯಿಗೆ
ಪಾಲಕಂತು ಮುಟ್ಟಲಾರೆ
ಕಾಲು ಕೇಜಿ ಬದನೆಕಾಯಿಗೆಂಟು ರೂಗಳು
ಚೀಲ ತುಂಬ ಸೊಪ್ಪು ತರುವ
ಕಾಲ ಹೋಯ್ತು ಈಗ ದೊಡ್ಡ
ಸಾಲ ಮಾಡಬೇಕು ಕಾಯಿಪಲ್ಲೆ ತಿನ್ನಲು
ಕೊಂದು ತಂದು ಕೋಳಿಯನ್ನು
ಬೆಂದ ಮೇಲೆ ಖಾರ ಹಚ್ಚಿ
ತಂದುರಿಯನು ಮಾಡಿ ತಿಂದರೆಷ್ಟು ಚೆನ್ನವೋ
ಅಂದು ರಾತ್ರಿ ತಂದೆಯೊಡನೆ
ಒಂದು ಪೆಗ್ಗು ವಿಸ್ಕಿ ಕುಡಿದು
ಗುಂಡು-ತುಂಡು ಸೇವೆಯನ್ನು ಪೂರ್ಣ ಮಾಡಿದೆ.
ನಾಳೆಯೇನು ತಿಂಡಿಗೆಂದು
ಕೇಳಿದಾಗ ಮಮ್ಮಿಯನ್ನು
ಗೋಳಿಬಜೆಯ ಜೊತೆಗೆ ಕಾಯಿ ಚಟ್ನಿಯೆಂದಳು
ಹಾಲು ತರಲು ಹೋಗಲಮ್ಮ
ಕಳ್ಳನಂತೆ ನುಗ್ಗಿ ನಾನು
ಏಳು ಗೋಳಿಬಜೆಯ ಚಟ್ನಿಯೊಡನೆ ತಿಂದೆನು
Comments
ಓದಿ ನಗುವ ತಡೆಯಲಾರ್ದೆ
ಬಾಯೊಳಿಪ್ಪ ಪೂರ ಹಲ್ಲ ತೋರಿ ಬಿಟ್ಟೆವು
ನಿಮ್ಮ ಎಲ್ಲ ಬರಹ ಓದಿ
ಬಾಯ ಕೊನೆಯು ಕಿವಿಗೆ ಸೇರಿ
ಒ೦ದು ತಾಸು ಸಾಲದಾಯ್ತು ಬಾಯಿ ಮುಚ್ಚಲು