Skip to main content

ಶ್ಯಾನು "ಭೋಗ "

ಭೋಗ ಷಟ್ಪದಿಯಲ್ಲಿ ರಚಿತವಾದ ಈ ಷಟ್ಪದಿಗಳು ದಿನಾಂಕ 07/02/2010   ರ ವಿಜಯಕರ್ನಾಟಕದಲ್ಲಿ ( ಶ್ರೀವತ್ಸ ಜೋಷಿಯವರ " ಪರಾಗಸ್ಪರ್ಶ " ಅಂಕಣದಲ್ಲಿ ) ಪ್ರಕಟಿತ .
============================================================





ಏರುಪೇರು ಭರತವಿಳಿತ

ಜಾರುಬಂಡಿ ಮೆಟ್ಟಿಲಾಟ

ಷೇರುಮಾರುಕಟ್ಟೆಯೊಳಗಿದೆಷ್ಟು ಗೊಂದಲ

ಬಾರು-ಬೀರಿನಂತೆ ನೀವು

ಷೇರುದಾಸನಾದರಂಡ್ರ

ವೇರಿನಲ್ಲಿ ಬರುವ ದಿನವು ದೂರವುಳಿಯದು
====================================================
ಭೋಗದಲ್ಲಿ ಬರೆದೆ ಎಂದು

ಬೀಗುತಿರುವ ನೀನು ಹೀರೊ

ಆಗಬೇಡವೆಂದು ಗೆಳೆಯ ಟಾಂಟು ಹೊಡೆದನು

ಯೋಗ ನೆಟ್ಟಗಿದ್ದು ಪ್ರಕಟ

ವಾಗಿಬಿಟ್ಟರೆನ್ನ ಕವನ

ಬೀಗ ಜಡಿದು ಬಿಡುವೆ ನೋಡಿರವನ  ಬಾಯಿಗೆ
 ======================================
ಆಲು ಬೆಲೆಯು ಗಗನದಲ್ಲಿ

ಪಾಲಕಂತು ಮುಟ್ಟಲಾರೆ



ಕಾಲು ಕೇಜಿ ಬದನೆಕಾಯಿಗೆಂಟು ರೂಗಳು
ಚೀಲ ತುಂಬ ಸೊಪ್ಪು ತರುವ
ಕಾಲ ಹೋಯ್ತು ಈಗ ದೊಡ್ಡ
ಸಾಲ ಮಾಡಬೇಕು ಕಾಯಿಪಲ್ಲೆ ತಿನ್ನಲು
 ==========================================
ಕೊಂದು ತಂದು ಕೋಳಿಯನ್ನು
ಬೆಂದ ಮೇಲೆ ಖಾರ ಹಚ್ಚಿ
ತಂದುರಿಯನು ಮಾಡಿ ತಿಂದರೆಷ್ಟು ಚೆನ್ನವೋ
ಅಂದು ರಾತ್ರಿ ತಂದೆಯೊಡನೆ
ಒಂದು ಪೆಗ್ಗು ವಿಸ್ಕಿ ಕುಡಿದು
ಗುಂಡು-ತುಂಡು  ಸೇವೆಯನ್ನು ಪೂರ್ಣ ಮಾಡಿದೆ.
 ======================================================
ನಾಳೆಯೇನು ತಿಂಡಿಗೆಂದು
ಕೇಳಿದಾಗ ಮಮ್ಮಿಯನ್ನು
ಗೋಳಿಬಜೆಯ ಜೊತೆಗೆ ಕಾಯಿ ಚಟ್ನಿಯೆಂದಳು
ಹಾಲು ತರಲು ಹೋಗಲಮ್ಮ
ಕಳ್ಳನಂತೆ ನುಗ್ಗಿ ನಾನು
ಏಳು ಗೋಳಿಬಜೆಯ ಚಟ್ನಿಯೊಡನೆ ತಿಂದೆನು
====================== ವಿಕಟಕವಿ ==================

Comments

Anonymous said…
super maraya :)
ನೀವು ಬರೆದ ಷಟ್ಪದೀಯ
ಓದಿ ನಗುವ ತಡೆಯಲಾರ್ದೆ
ಬಾಯೊಳಿಪ್ಪ ಪೂರ ಹಲ್ಲ ತೋರಿ ಬಿಟ್ಟೆವು
ನಿಮ್ಮ ಎಲ್ಲ ಬರಹ ಓದಿ
ಬಾಯ ಕೊನೆಯು ಕಿವಿಗೆ ಸೇರಿ
ಒ೦ದು ತಾಸು ಸಾಲದಾಯ್ತು ಬಾಯಿ ಮುಚ್ಚಲು
ಧನ್ಯವಾದಗಳು ಜ್ಯೋತಿ ಮತ್ತು "." ಅಂದರೆ ಚುಕ್ಕಿ :)
NLsha said…
Why these shatpadi's are haunting me.your creations are interesting. This is Modern Jaanapada

Popular posts from this blog

ಆಪೀಸಾಯಣ

ನವೆಂಬರ್ 22 ರಂದು ಆಪೀಸಿನಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಪೀಸಿನಲ್ಲಿರುವವರ ಹೆಸರನ್ನೆಲ್ಲ ಸೇರಿಸಿ ಹೊಸೆದ ಪದ್ಯ. ನೀಲಿ  ಬಣ್ಣದಲ್ಲಿ ಬರೆದವು ಅವರ ಹೆಸರುಗಳು. ದೇವಾದಿದೇವತೆಗಳು ಸಭೆಯನ್ನು ನಡೆಸಿ ಸಭೆಯೊಳಗೆ ಸು ಮಧು ರ ಕನ್ನಡವ ಬಡಿಸಿ || ಎಲ್ಲಾ ದೇವರಿಗೂ ಕನ್ನಡವು ಹಿಡಿಸಿ ಬಂದು ಕೂತಿಹರೆಲ್ಲ tatasky ODC ||               ಕೃಷ್ಣ ನಿಹನಿಲ್ಲಿ  ಇಹನು   ರಘು-ರಾಮ                     ಮಂಜುನಾಥ ರು ತ್ರಿಮೂರ್ತಿಯಲಿ ಹರಸಿರುವ ಧಾಮ ||                     ಪಾವನ-ಪುನೀತರಾಗಿ ಕೇಳಿ ಮೋಹನ ನ ಬಾನ್ಸುರಿ                     ಸ್ವಪ್ನ ದಲ್ಲಷ್ಟೇ ಸಿಗುವುದು ಇಂಥಹ ಚಾನ್ಸು ರೀ... || ವಿಘ್ನ ದಿಂ ಕಾಯುತಿಹ ದ್ವಾರದಲೇ ಬೆನಕ ಎಲ್ಲ ದೇವರಿಗೂ ಶರಣು ನಮ್ಮ ಗುರು ಗಳ ತನಕ ಸಂಕಟದಿ ಕರೆದೊಡನೆ ಸ್ವಾಮಿ ವೆಂಕಟೇಶ ಹರುಷ ದಲಿ ಕಳಿಸುವ...

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕ...