Skip to main content

Posts

ಮುಂಬೈಯೊಳಗೊಂದು ಮನೆಯ ಮಾಡಿ ರೈಲಿಗಂಜಿದೊಡೆಂತಯ್ಯಾ ????

********** "Platform ಕ್ರಮಾಂಕ್ ಚಾರ್ ವರ್ ಆಲೇಲಿ ಲೋಕಲ್ ಆಟ್ ವಾಜ್ಹೂನ್ ಇಕುನ್ ಚಾಲಿಸ್ ಮಿನಿಟಾಂಚಿ ಹಾರ್ಬರ್ ಲೈನ್ ವರೂನ್ ಶಿವಾಜಿ ಟರ್ಮಿನಸ್ ಲಾ ಜ್ಹಾಣಾರಿ ಧೀಮಿ ಲೋಕಲ್ ಆಹೇ " --------------7:30 ಕ್ಕೆ ರೈಲ್ವೆ ಸ್ಟೇಶನ್ ನಲ್ಲಿದ್ದ ನಾನು ಬಿಕೋ ಎನ್ನುತ್ತಿದ್ದ ಸ್ಟೇಷನ್ನನ್ನು ನೋಡಿ ,ಅಬ್ಬಾ.... ಇಂದಾದರೂ ಸುಖವಾಗಿ ಕುಳಿತು ಹೋಗಬಹುದು ಎಂದು ಮನಸ್ಸಿನ ಮಂಡಿಗೆ ತಿನ್ನುತ್ತಿದ್ದೆ . ಆದರೆ .... ಎಲ್ಲಿ ? ಏನು ?ಹೇಗೆ? ಎತ್ತ ? ತಿಳಿಯದು ರೈಲಿನ ಆಗಮನಕ್ಕೆ 2 ನಿಮಿಷ ಮೊದಲು ಇರುವ 10 ದಿಕ್ಕು ಸಾಲದೇ ಇನ್ನೆರಡು extra ದಿಕ್ಕುಗಳನ್ನು ಸೃಷ್ಠಿಸಿಕೊಂಡು ಜನಪ್ರವಾಹ ಹರಿದು ರೈಲಿನಲ್ಲಿ ಬಿಡಿ platform ನಲ್ಲೂ ನಿಲ್ಲಲು ಜಾಗ ಇಲ್ಲದಾಯಿತು . " ಹ್ಹಾ .... ಚಲಾ .... " " ಉತರ್ಕೆ ಚಡೋ ಭಾಯಿ" ಕೂಗು. Engineering college ,love ಮತ್ತು local train ಈ ಮೂರು ವಿಷಯಗಳಲ್ಲಿ common ಏನೆಂದರೆ ಒಳಗಿರುವವರು ಹೊರಗೆ ಬಂದರೆ ಸಾಕೆಂದುಕೊಂಡರೆ ಹೊರಗಿರುವವರು ಒಳಗೆ ಸೇರುವ ತವಕದಿಂದಿರುತ್ತಾರೆ . Mechanical ನಲ್ಲಿ Engineering ಮಾಡಿರುವ ನಾನು Ph.D ಗಾಗಿ “Physical analytical psychological and logical study on Mubai-Local trains and the crowd,Arrival-Departure timings,Handling the crowd, Tragedies included and strategies to get...

ನೆನಪಿನ ಬುತ್ತಿಯಿಂದ........

ವಚನ ಬ್ರಹ್ಮ ಸರ್ವಜ್ಞ ಇಂದು ಬದುಕಿದ್ದು ಒಂದು ವೇಳೆ ನಮ್ಮ ಕಾಲೇಜಿನ ದರ್ಶನ ಮಾಡಿದ್ದಲ್ಲಿ " ಜೇಸಿಯಲಿ ಸೀಟಿರಲು ಮೆಸ್ಸಿನಲಿ ಪ್ಲೇಟಿರಲು ಹಾಸ್ಟೇಲಿನ ಬೆಡ್ಡಿನಲಿ ಮಲಗಿರಲು ಸ್ವರ್ಗವೂ ಠುಸ್ಸ .... ಎಂದ - ಸರ್ವಜ್ಞ ಎಂದು ಹೇಳುತಿದ್ದ ಎಂಬುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ .ನನ್ನ ಜೀವನದ ಅವಿಸ್ಮರಣೀಯ ಕಾಲ ಯಾವುದೆಂದು ಯಾರಾದರೂ ಕೇಳಿದರೆ ಈ ನಾಲ್ಕು ವರ್ಷಗಳ ಹಾಸ್ಟೇಲ್ ಜೀವನ ಎನ್ನಲು ಬಹಳ ಸಂತೋಷಪಡುತ್ತೇನೆ . ಈಗ ನೀವೇ ನೋಡಿ, ನಮ್ಮ ಕಾಲೇಜಿನ End-to-End ದರ್ಶನ ಮಾಡಬೇಕಾದರೆ ಬಲ ತುದಿಯ Boys Hostel ನಿಂದ ಎಡ ತುದಿಯ Girls Hostel ತನಕ ನೋಡಬೇಕು .ಹೀಗೆ ಹಾಸ್ಟೇಲ್ ನೋಡದೆ ಜೇಸಿಯ ದರ್ಶನ ಪರಿಪೂರ್ಣವಾಗದು. ನನ್ನ ಎಲ್ಲ ಅನುಭವಗಳನ್ನು ಬರೆಯುತ್ತ ಹೋದರೆ ಒಂದು ಸಂಪುಟ ರಚಿಸುವಷ್ಟು ವಿಷಯಗಳಿದ್ದರೂ ಬಹಳ ಕಷ್ಟಪಟ್ಟು 2 ಪುಟಗಳಿಗೆ ಭಟ್ಟಿ ಇಳಿಸಿ ನನ್ನ ಅನುಭವ ಹಾಗೂ ಹಾಸ್ಟೇಲಿನ ಹಿರಿಮೆಯನ್ನು ಹಂಚಿಕೊಳ್ಳುವ ಕಿರುಪ್ರಯತ್ನ ಮಾಡಿದ್ದೇನೆ . "ಪುಷ್ಪ ಮಹಲ್ " ನಲ್ಲಿ ಕಳೆದ ಮೊದಲನೆ ವರ್ಷ ನಿಜಕ್ಕೂ ಅವಿಸ್ಮರಣೀಯ ನೆನಪಿನ ಬುತ್ತಿ . ಮೊದಲ ಎರಡು ವಾರ ಹೊಸ ಮುಖಗಳ ಪರಿಚಯದಲ್ಲೇ ಕಳೆದರೂ ,ಒಂದೇ ತಿಂಗಳಿನಲ್ಲಿ ಎಲ್ಲರೂ ಪರಸ್ಪರ ಅಡ್ಡ ಹೆಸರಿನ ಸಂಬೋಧನೆ ಶುರು ಮಾಡಿದ್ದೆವು .ಜೆ.ಎಸ್.ಎಸ್ ,ಕೋಳ್ಯ,ಅನ್ಯ ,ಸ್ಲಮ್,ಸೇಟು,ಸೈಕೋ,ಹೈವಾನ್ ,ಜಾಂಬೂ,ದೇಸಿ, ದೊಡ್ಡು,ಕುಮಟಾ ಎಲ್ಲ ಈ ಗರಡಿಯವರೇ. ಕಾರಿಡಾರ್ ಕ್ರಿಕೆಟ್ ನಿಂದ ಹಿಡಿ...

ಸೌಂದರ್ಯೋಪಾಸನೆ

********************************************************************************** ಸೈಕಲ್ ಸ್ಟಾಂಡಿನಲ್ಲಿ ಗೆಳೆಯನೊಬ್ಬನನ್ನು ಕಾಯುತ್ತ ನಿಂತಿದ್ದೆ . ದೂರದಲ್ಲಿ ಕೆಲವು ಕನ್ಯಾಮಣಿಯರು ಬರುತ್ತಿದ್ದರು . ನಾನು ಟೆನ್ಷನ್ ನಲ್ಲಿದ್ದುದರಿಂದ ಅವರೆಡೆ ಅಷ್ಟು ಗಮನ ಹರಿಸಲಿಲ್ಲ . ಅವರಲ್ಲೊಬ್ಬಳು ನಾನು ಅವಳನ್ನು ಗಮನಿಸಲೇಬೇಕೆಂಬ ಹಠ ತೊಟ್ಟಿದ್ದಳೋ ಏನೋ , ಏರುದನಿಯಲ್ಲಿ ಅವಳ ಮಾತು - ನಗು ಸಾಗಿತ್ತು .ಆದರೂ ನಾನು ಗಮನಿಸದವನಂತೆ ನಿಂತಿದ್ದೆನು. ಆದರೆ ಅವಳೂ ಬಿಡದೆ ಹತ್ತಿರ ಬಂದು ಟೈಮ್ ಎಷ್ಟು ಎಂದು ಕೇಳಿದಳು .ನಾನು 4:20 ಎಂದೆನು. ಅದಕ್ಕವಳು ನಿಮ್ಮ ವಾಚ್ 10 ನಿಮಿಷ ಮುಂದಿದೆ ಸರಿಮಾಡಿಕೊಳ್ಳಿ ಎಂದು ಹೇಳಿ ಗೆಳತಿಯರೊಡನೆ ನನ್ನನ್ನು ಅಣಕಿಸುತ್ತಾ ನಡೆದಳು . ಮತ್ತೆ ಹಿಂದಿರುಗಿ " ಕ್ಷಮಿಸಿ , ನೀವು ಕವನ ಬರೆಯುತ್ತೀರಲ್ಲಾ ??" ಎಂದು ಕೇಳಿದಳು .ನಾನು ಇವಳು ಎಲ್ಲೋ ನನ್ನ ಕವನಗಳನ್ನು ಓದಿರಬೇಕೆಂದುಕೊಂಡು ಪ್ರಶಂಸೆಯನ್ನು ನಿರೀಕ್ಷಿಸುತ್ತಾ ಹೌದು ಎಂದೆನು. ಆಗ ಅವಳು " ನನ್ನ ಬಗ್ಗೆ ಕವನ ಬರೆಯುತ್ತೀರಾ ?" ಎಂದು ವ್ಯಂಗ್ಯವಾಗಿ ಅನುನಾಸಿಕದಲ್ಲಿ ಕುಹಕವಾಡುತ್ತಾ ಹೋದಳು . ಹೀಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎರಡು ಬಾರಿ ನನ್ನನ್ನು ತಬ್ಬಿಬ್ಬಾಗಿಸಿ ಹೋದಳು . ನನಗೋ ಕೆಟ್ಟ ಕೋಪ ಬಂತು . ಅವಳ ಸೊಕ್ಕನಡಗಿಸಿ ನನ್ನ ಲೇಖನಿ ...

JCE ROCKS!!!!!

************************************************************ ಸುತ್ತ ಕವಿದಿರೆ ಅಂಧಕಾರವು ಮತ್ತೆ ಇರದಿರೆ ಜ್ಞಾನದೀಪವು ಬಿತ್ತಿದರು ಸುತ್ತೂರು ಸ್ವಾಮಿಗಳಿಲ್ಲಿ ಬೆಳಕನ್ನು || ಕತ್ತಲದು ಕಾಲ್ಕಿತ್ತು ಓಡಿತು ಮತ್ತೆ ಹರಿಯಿತು ಜ್ಞಾನದೀಪ ಸ ಮಸ್ತ ಲೋಕಕೆ ಬೆಳಕು ಬೀರಿದ ನಿಮಗೆ ವಂದಿಪೆವು || ಮಾನವನೋ ?? ಇವ ದೇವದೂತನೋ ?? ನಾನು ಅರಿಯೆನು ಇದನು ದಿಟದಿಂ ಜ್ಞಾನಸಾಗರ ಹರಿಸಿದೀತನು ದೇವನವತಾರಿ || ಜ್ಞಾನಶಿಖರದ ತುತ್ತತುದಿಯಲಿ ಮಿನುಗು ತಾರೆಯ ತೆರದಿ ಮಿನುಗುತ ಜನರ ಮನದೊಳು ಮನೆಯ ಮಾಡಿದೆ ನಮ್ಮ ಜೆ ಸಿ ಇ || ನುರಿತ ಅಧ್ಯಾಪಕರ ತಂಡವು ಸರುವಸಜ್ಜಿತ ಪ್ರಯೋಗಾಲಯ ಗರುವದಲಿ ನಾ ಹೇಳಿಕೊಳ್ಳುವೆ ಎಲ್ಲ ಇಲ್ಲಿಹುದು || ಗರಡಿ ಮನೆಯಿದು ಹೊರಗೆ ತರುವುದು ತರುಣ ಪ್ರತಿಭೆಗಳನ್ನು ವರುಷಕು ಧರಣಿಮಂಡಲದೆಲ್ಲೆಡೆಯಲಿಹರಿದರ ಆತ್ಮಜರು || ಜೇಸಿ ಮಹಿಮೆಯ ಹೇಳ ಹೋದರೆ ಮಾಸಗಳು ಹಲವಾರು ಸಾಲದು ಮೀಸೆ ತಿರುವುತ ಹೇಳುವೆನು ನಾ ನಾನು ಜೇಸಿಯವ|| ಹಾಸು ಹೊಕ್ಕಿದೆ ಇದರಲೆಲ್ಲವು ಪ್ಲೇಸುಮೆಂಟಾಗುವುದು ಖಚಿತವು ಏಸು ಜನುಮದ ಪುಣ್ಯವೋ ?? ನಾನಿಲ್ಲಿ ಬಂದಿರುವೆ || **********************************************---ವಿಕಟಕವಿ

ನಂಬಿ ಕೆಟ್ಟವರು

****************************************************** ಹಣವ ಗಳಿಸಿದೆ ಬೆವರ ಸುರಿಸುತ ರಣದ ಸೈನಿಕನಂದದಿಂ ಕಂ ಕಣವ ತೊಟ್ಟೆನು ಮನೆಯ ಕಟ್ಟಲು ನಮ್ಮ ಊರಿನಲಿ|| ತೃಣದಿ ನಾ ಕಂಡೆನು ಸುಖವ ಚಣ ಚಣವು ಕಷ್ಟದಿ ದುಡಿದೆ ನಾ ಕಡಿ ವಾಣವಿಕ್ಕಿದೆ ನನ್ನ ಖರ್ಚಿಗೆ ಗುರಿಯ ಸಾಧಿಸಲು || ಚಲಿಸಿದೆನು ಕಾಲ್ಗಳಲಿ ನಡೆಯುತ ಉಳಿಸಿದೆನು ಹಣವನ್ನು ವ್ಯಯಿಸದೆ ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ|| ಮುಳುಗಿ ಹೋಯಿತು ಎಲ್ಲ ಹಣ ನಾ ಕಳೆದುಕೊಂಡೆನು ನನ್ನ ಕನಸನು ಹಳಿದುಕೊಂಡೆನು ಹಲುಬಿದೆನು ನಾ ನನ್ನ ದುರ್ವಿಧಿಗೆ || ಹರನು ಮೆಚ್ಚುವುದಿಲ್ಲ ಇವರನು ನರರು ಚಚ್ಚದೆ ಬಿಡುವರೆನ್ ಸರ ಕಾರ ಕಣ್ಣನು ಮುಚ್ಚಿಕೊಳ್ಳುತ ಶಿಕ್ಷೆ ಕೊಡದಿರಲು|| ಪರರ ಸೊತ್ತನು ದೋಚುತಿಹ ತಸ್ ಕರರ ನಂಬಿದ ನಾವು ಕೆಟ್ಟೆವು ಕರುಮವೆಮ್ಮದು ಎನುತ ನಾವ್ಗಳು ಸಹಿಸಿಕೊಳಬೇಕು || ************************************--ವಿಕಟಕವಿ