******************************************************
ಹಣವ ಗಳಿಸಿದೆ ಬೆವರ ಸುರಿಸುತ
ರಣದ ಸೈನಿಕನಂದದಿಂ ಕಂ
ಕಣವ ತೊಟ್ಟೆನು ಮನೆಯ ಕಟ್ಟಲು ನಮ್ಮ ಊರಿನಲಿ||
ತೃಣದಿ ನಾ ಕಂಡೆನು ಸುಖವ ಚಣ
ಚಣವು ಕಷ್ಟದಿ ದುಡಿದೆ ನಾ ಕಡಿ
ವಾಣವಿಕ್ಕಿದೆ ನನ್ನ ಖರ್ಚಿಗೆ ಗುರಿಯ ಸಾಧಿಸಲು ||
ಚಲಿಸಿದೆನು ಕಾಲ್ಗಳಲಿ ನಡೆಯುತ
ಉಳಿಸಿದೆನು ಹಣವನ್ನು ವ್ಯಯಿಸದೆ
ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ||
ಮುಳುಗಿ ಹೋಯಿತು ಎಲ್ಲ ಹಣ ನಾ
ಕಳೆದುಕೊಂಡೆನು ನನ್ನ ಕನಸನು
ಹಳಿದುಕೊಂಡೆನು ಹಲುಬಿದೆನು ನಾ ನನ್ನ ದುರ್ವಿಧಿಗೆ ||
ಹರನು ಮೆಚ್ಚುವುದಿಲ್ಲ ಇವರನು
ನರರು ಚಚ್ಚದೆ ಬಿಡುವರೆನ್ ಸರ
ಕಾರ ಕಣ್ಣನು ಮುಚ್ಚಿಕೊಳ್ಳುತ ಶಿಕ್ಷೆ ಕೊಡದಿರಲು||
ಪರರ ಸೊತ್ತನು ದೋಚುತಿಹ ತಸ್
ಕರರ ನಂಬಿದ ನಾವು ಕೆಟ್ಟೆವು
ಕರುಮವೆಮ್ಮದು ಎನುತ ನಾವ್ಗಳು ಸಹಿಸಿಕೊಳಬೇಕು ||
************************************--ವಿಕಟಕವಿ

Comments
ಈ ಪದ್ಯ ನನಗ ಮತ್ತ ಸೇಟುಗ ಹೇಳಿದ್ದಿ. ನಿಮ್ಮೂರಾಗ ನಡದ ಘಟನೇ ಮ್ಯಾಲೆ ಇದು ಅದ ಹೌದಿಲ್ಲ?
ಒಳ್ಳೇದು. ಹೀಗೇ ಬರೀತಾ ಇರು. ಈಗ ಕೆಲಸ ಅದ. ಆಮ್ಯಾಲೇ ಮಾತಾಡೂಣು.
ಹರಿ ಓಂ.
ಜೈ ಶ್ರೀ ಯಲಗುರೇಶ ಪ್ರಸನ್ನ.