ನವೆಂಬರ್ 22 ರಂದು ಆಪೀಸಿನಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಪೀಸಿನಲ್ಲಿರುವವರ ಹೆಸರನ್ನೆಲ್ಲ ಸೇರಿಸಿ ಹೊಸೆದ ಪದ್ಯ. ನೀಲಿ ಬಣ್ಣದಲ್ಲಿ ಬರೆದವು ಅವರ ಹೆಸರುಗಳು.
------ ವಿಕಟಕವಿ
ದೇವಾದಿದೇವತೆಗಳು ಸಭೆಯನ್ನು ನಡೆಸಿ
ಸಭೆಯೊಳಗೆ ಸುಮಧುರ ಕನ್ನಡವ ಬಡಿಸಿ ||
ಎಲ್ಲಾ ದೇವರಿಗೂ ಕನ್ನಡವು ಹಿಡಿಸಿ
ಬಂದು ಕೂತಿಹರೆಲ್ಲ tatasky ODC ||
ಕೃಷ್ಣನಿಹನಿಲ್ಲಿ ಇಹನು ರಘು-ರಾಮ
ಮಂಜುನಾಥರು ತ್ರಿಮೂರ್ತಿಯಲಿ ಹರಸಿರುವ ಧಾಮ
||
ಪಾವನ-ಪುನೀತರಾಗಿ ಕೇಳಿ ಮೋಹನನ ಬಾನ್ಸುರಿ
ಸ್ವಪ್ನದಲ್ಲಷ್ಟೇ ಸಿಗುವುದು ಇಂಥಹ ಚಾನ್ಸು ರೀ... ||
ವಿಘ್ನದಿಂ ಕಾಯುತಿಹ ದ್ವಾರದಲೇ ಬೆನಕ
ಎಲ್ಲ ದೇವರಿಗೂ ಶರಣು ನಮ್ಮ ಗುರುಗಳ ತನಕ
ಸಂಕಟದಿ ಕರೆದೊಡನೆ ಸ್ವಾಮಿ ವೆಂಕಟೇಶ
ಹರುಷದಲಿ ಕಳಿಸುವನು ಮೇಘ ಸಂದೇಶ ||
ದೇವತೆಗಳಿಗೂ ಇಹುದು ನಮ್ಮ ನೋಡುವ ಇರಾದೆ
ಪ್ರಿಯವದನರಾಗಿ ಬಂದಿಹರು ಲಕ್ಷ್ಮಿ ಮತ್ತು ರಾಧೆ
ಶಾರದೆಯ ಆಶೀರ್ವಾದವೇ ನಮಗೆ ಕತ್ತಲಲಿ ದೀಪ್ತಿ ವಿಜಯಕ್ಕೆ ಸ್ಪೂರ್ತಿ
ಒಂದು ನಿಮಿಷ... ನನ್ನ ಕಾವ್ಯವಾಗಿಲ್ಲ
ಪೂರ್ತಿ!!!
ಕನ್ನಡಿಗರು ನಾವು... ಕಾಯಕಕ್ಕೆ
ಸೈ ವಿಶ್ವಾಸಕ್ಕೆ ಜೈ||
ನಮ್ಮೆಲ್ಲರ ಮನಸ್ಸು ಹೃದಯ ಬಾನಿನಷ್ಟು
ಹೈ
ಸ್ನೇಹದಲ್ಲೋ ನಮ್ಮೆಲ್ಲದದು ಸದಾ
ಎತ್ತಿದ ಕೈ
ಇದಕ್ಕೆ ಒಳ್ಳೆಯ ಉದಾಹರಣೆ.. ಒಂದೇ
ಕುಟುಂಬದಂತಿರುವ ನಮ್ಮ tatasky
Comments