Skip to main content

Posts

Showing posts from July, 2010

WELCOME TO KUNDAPUR !!!!!! - PART-III

"ಹ್ಜಬ್ದ್ಸ್ಕ್ಫ಼್ಜಒಇಗ್ತಿಎಬ್ಗ್ಕ್ಜ್ಬ್ದ್ವ್ವಿಹ್ಗಿದ್ಕ್ವ್ಶ್ದ್ಪ್ಫ಼್ವೆಒಗ್ [ ವ್ಪೆಗ್ಸ್ದ್ಜ್ಗ್ವ್೦ಗ್ [ ವ್ಜ್ಗ್ಸ್ದ್ಬ್ಲ್ವ್ [ ಒಸ್ರ್ಗ್" ಏನು ?? ಅರ್ಥ ಆಗಲಿಲ್ವಾ ?? ಸಂತೆಯ ಗೌಜಿ ಮಾರಾಯ್ರೆ ... ನನಗೂ ಸರಿಯಾಗಿ ಕೇಳಿಸುತ್ತಿಲ್ಲ . ಸ್ವಲ್ಪ ಹತ್ತಿರ ಹೋಗಿ ಕೇಳುವುದು ಒಳ್ಳೆಯದು . ಆಮೇಲೆ ಪಕ್ಕದಲ್ಲಿ ಕುಂಬಳಕಾಯಿ ಮಾರುತ್ತಿರುವವನ ಬೆಲೆ ಕೇಳಿ ಸೇಬು ಮಾರುವವನ ಹತ್ತಿರ ಬಂದು " ಎಂತದು ??? ಈಗ ಎಂಟು ರುಪಾಯಿ ಕಿಲೋ ಅಂತ ಬೊಬ್ಬೆ ಹಾಕಿದ್ರಿ " ಎಂದೆಲ್ಲ ಹೇಳಿದರೆ ಧರ್ಮದೇಟು ಬೀಳುವುದು ಖಂಡಿತ . " ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕಂಜಿದೊದೆಂತಯ್ಯ " ಎಂದು ದಾಸರು ಬರೆಯುವಾಗ ಅವರು  ಕುಂದಾಪುರದಲ್ಲೇ ಇದ್ದರೆಂದು ಕಾಣುತ್ತದೆ . ಸಂತೆಯೊಳಗೆ ಯಶಸ್ವಿಯಾಗಿ ವ್ಯಾಪಾರ ಮಾಡಿ ಬಂದರೆ ಅವನು ಅರಿಯದೆ ಒಂದು ಅವಧಾನ ಕಾರ್ಯಕ್ರಮ ಮಾಡಿ ಬಂದಂತೆ Photo courtesy : http://www.flickr.com/photos/palachandra/sets/72157622395311690/ ನೀವೇ ನೋಡಿ . ಒಂದು ವೇಳೆ ನಿಮಗೆ ಸೌತೇಕಾಯಿ ತೆಗೆದುಕೊಳ್ಳಬೇಕೆಂದುಕೊಳ್ಳಿ ............. ನಿಮ್ಮದು ಒಂದೇ ಪ್ರಶ್ನೆ .... ಹೋಯ್ ಸೌತೇಕಾಯ್ ಹೇಂಗ್ ಮಾರ್ರೆ .............. ಉತ್ತರಗಳು --- ಅಲ್ಲ ಲೋರಿ ಅನ್ ಲೋಡ್ ಆತಿತ್ತ ಮಾರ್ರೆ ........ ಕಳ್ಸಿ ಕೊಡ್ತೆ ...  ( ಭಟ್ಕಳದಿಂದ ಬಂದ ಬಟಾಟೆ ವ್ಯಾಪಾರಿ ಮೊಬೈಲಿನಲ್ಲಿ ) ಮುಂದಿನ್ ವಾರ ಕೊಡ್...

WELCOME TO KUNDAPUR !!!!!! - PART-II

ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ || ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ || ಮನೆಗೆ ತಲುಪಿದೊಡನೆ ಅಮ್ಮ-ಅಪ್ಪನೊಂದಿಗೆ ಮೊದಲ ಸುತ್ತಿನ ಸೆಂಟಿಮೆಂಟುಗಳು ಮುಗಿದ ಮೇಲೆ ಒಮ್ಮೆ ಹೊರಬಂದು ಪ್ರಾತಃಕಾಲದ ಕುಂದಾಪುರ ದರ್ಶನ   ಮಾಡಿ ಬಂದೆನು. ಆ ದರ್ಶನದ ರನ್ನಿಂಗ್ ಕಾಮೆಂಟರಿ......... " ಪೆಟ್ರೋಲ್ ಬಂಕ್ ನಲ್ಲಿ ಟವೆಲ್ ಉಟ್ಟು ಬಸ್ ತೊಳೆಯುತ್ತಿರುವ ಕ್ಲೀನರ್ , ಅಶ್ವಥ್ಥ ಮರಕ್ಕೆ ಸುತ್ತು ಹಾಕುತ್ತಿರುವ ಜನರೇಶನ್ 3 , ನಡೆದು ಬಾರಯ್ಯಾ ssss ಭವಕಡಲಿಗೇ sss s ಪ್ರತಿದಿನ ಇದನ್ನೇ ಹಾಡುವ ಬೊಬ್ಬರ್ಯ ಕಟ್ಟೆಯ ಕ್ಯಾಸೆಟ್ಟು , ಹತ್ತಿದ ಸೈಕಲ್ಲನ್ನು ನಿಲ್ಲಿಸದೇ.... ನೆಲಕ್ಕೆ ಕಾಲು ತಾಗಿಸದೇ ಮನೆಯ ಬಾಗಿಲ ಬುಡಕ್ಕೇ ಪೇಪರ್ ಎಸೆಯುವ ಶಾರ್ಪ್ ಶೂಟರ್ ಪೇಪರಿನವನು , ಶಾಸ್ತ್ರಿ ಪಾರ್ಕಿನಲ್ಲಿ ಮುಂಜಾನೆ ಭಟ್ಕಳ ಬೆಂಗಳೂರಿನಿಂದ ಬಂದ ಹೂವಿಗೆ ನೀರು ಚಿಮುಕಿಸುತ್ತಿರುವ ಹೂವಿನ ವ್ಯಾಪಾರಿಗಳು , ಬಿಕೋ ಎನ್ನುತ್ತಿರುವ ರೋಡು ಹಾಗೂ ಅಂಗಡಿಯಲ್ಲಿ ಕೂತಿರುವ ನನ್ನ ಡ್ಯಾಡು. ಇಷ್ಟೇ." ಒಂದು ನಾಲ್ಕೈದು ವರ್ಷಗಳ ನಂತರ ಕುಂದಾಪುರಕ್ಕೆ ಯಾರಾದರೂ ಬಂದರೆ ಒಂದು ಬಾರಿ ತಾನು ಯಾವ ಊರಿಗೆ ಬಂದೆ ಎಂದು ಬೆಚ್ಚಿ ಬೀಳುವುದು ಸಹಜ. ಶಾಸ್ತ್ರಿ ಪಾರ್ಕಿನ ಮಧ್ಯ ಕದಲದೇ ನಿಂತಿರುವ ಶಾಸ್ತ್ರಿಗಳೊಬ್ಬರೇ ಈ ಎಲ್ಲಾ ಬದಲಾವಣೆಗಳಿಗೆ ಮೂಕ ಸಾಕ್ಷಿ. ಎಲ್ಲಿಯವರೆಗೆಂದರೆ ಶ್ರೀ ಬೊಬ್ಬರ್ಯನವರು ಕೂಡಾ ಹೊಸ RCC ಮನೆ ಕಟ್ಟಿಕೊಂಡಿದ್ದಾರೆ....