Skip to main content

Posts

Showing posts from February, 2010

ದಿಬ್ಬಣ

ಕೇಳಿದಳು ಕನಸಿನಲಿ ಕತ್ರಿನಾ ಕೈಫು ಆಗಲೇ ಸುಮಂತಾ ನಾ ನಿನ್ನ ವೈಫು ಹೇಳಿದೆನು ನೀನೊಂದು ಕೆಲಸವನು ಮಾಡು ಮನೆ ಮುಂದೆ ನಿಂತಿರುವ ಕ್ಯೂವನ್ನು ನೊಡು|| ಸೈಫ ಅಲಿ ಖಾನಲ್ಲಿ ಇಲ್ಲವೊ ದಮ್ಮು ನನ್ನವನಾಗೋ ಓ  ನನ್ನ ಸುಮ್ಮು!!!! ಬೇಡುತ್ತ ನಿಂತಿಹಳು ನೋಡು ಕರೀನಾ ಬಕರಾ ಆಗಲು ನಾನೇನು ಕುರಿ ನಾ ?? ಬಹುಕಾಲದಿಂದ ನಾ ಮೆಚ್ಚಿಹೆನು ನಿನ್ನ ತಪ್ಪು ಮಾಡಿದೆ ವರಿಸಿ ಸಣ್ಣ ’ಬಚ್ಚಾ’ನನ್ನ ( SMALL  ' B' ) ಓಡಿ ಬರುವೆ ನಾ ಹಿಡಿದು ನಿನ್ನ ಕೈ ತುದಿಗಾಲ ಮೇಲಿಹಳು ಐಶ್ವರ್ಯ ರೈ|| ನಮ್ಮೂರ ಗಂಡಿವನು ನನಗೆ ಪ್ರಿಫರೆನ್ಸು ಕ್ವೀನು ನಾನು ನೀನೇ ನನ್ನ ಪ್ರಿನ್ಸು ಇಲ್ಲ ಅಂದರೆ ನಿನಗೆ ನನ್ನ ಮೇಲಾಣೆ ಹಕ್ಕು ಚಲಾಯಿಸುತ್ತಿಹಳು ಪಡುಕೋಣೆ|| ಸೌತ್  ಇಂಡಿಯನ್ನರದ್ದು ಸಪರೇಟು ಸಾಲು ನಾನೇ ಬೇಕೆಂದು ಎಲ್ಲರದು ಗೋಳು ಒಲ್ಲೆನೆಂದರೆ ನಾನು  ಕುಡಿಯುವೆನು ವಿಷ ಎಂದು ಬೆದರಿಸುತ್ತಿದ್ದಾಳೆ ತ್ರಿಷಾ ಜಾನ್ ಹೈ ತು ಎನ್ನುತ್ತಾಳೆ  ಜೆನಿಲಿಯಾ ಛತ್ರ 'ಪತಿ' ಯಾಗೋ ಎಂದೆನುವ ಶ್ರೀಯಾ ನನ್ನೊಳಗೆ ನೀನು ನಿನ್ನೊಳಗೆ ನಾನು ಲಲ್ಲೆಗರೆಯುತ್ತಿರುವಳು ಆಸೀನು|| ಬಿಪಾಷಾ ಮಲ್ಲಿಕಾರನ್ನು ಮಾಡಿದೆ ಅವೈಡು ರಾಖೀ ಸಾವಂತು ಡಿಸ್ ಕ್ವಾಲಿಫೈಡು ಬೋಲ್ಡು ಮಾಡಲು ಎಸೆದಿಹಳು ಬಾಲನ್ನು ವಿದ್ಯಾ ಪ್ರಿಯಾಂಕ ಬರೆದು ಕಳಿಸಿರುವಳು ಪ್ರೇಮ ಪದ್ಯ || ಓದಿ ಕವನವ ಶಾಂತಿಗೆ ನೆತ್ತಿಗೇರಿತು ಪಿತ್ತ ಹುಡುಕಿದಳು ...

ಸೌಂಡ್... ಆಕ್ಷನ್ .... ಕಟ್ ....!!!!!

ಏನೋ ರಾಶಿ !!!!!................... ಅಶರೀರವಾಣಿ................. ನನ್ನ ಗೆಳೆಯ ಕೂಗಿದಂತಾಯಿತು. ಸರಿಯಾಗಿ ಪೂರ್ತಿ ವಾಕ್ಯ ಕೇಳಿಸಲಿಲ್ಲ. ಒಂದು  ಕ್ಷಣ ಹುಚ್ಚು ಮನಸ್ಸು ಕಲ್ಪನೆಯ ಕುದುರೆಯ ಮೇಲೆ ಮೂರ್ಲೋಕ ಸಂಚಾರ ಮಾಡಿ ಬಂದರೂ ಮರುಕ್ಷಣವೇ ನನ್ನ ಕರ್ಣದ್ವಯಗಳ ಮೇಲೆ ಅನುಮಾನ ಬಂದಿತು. ಯಾವತ್ತೂ ನನ್ನ ಸ್ನೇಹಿತರ "ಎಷ್ಟು ಕೊರೀತೀಯೊ"!!!..........  " ಯಾಕೋ ನನ್ ಬಟ್ಟೆ ಹರೀತಿಯೋ????  " ದಮ್ಮಯ್ಯ..... ಬಿಟ್ ಬಿಡೊ!!!  " ಎಂಬಿತ್ಯಾದಿ ಪ್ರತಿಕ್ರಿಯೆಗಳಿಗೆ ಒಗ್ಗಿ ಹೊಗಿದ್ದ ಕಿವಿಗಳು ನನ್ನನ್ನು "ರಾಶಿ" (ಡಾ|| ಎಂ ಶಿವರಾಂ..... ಪ್ರಖ್ಯಾತ ಹಾಸ್ಯಬರಹಗಾರರು ) ಅವರಿಗೆ ಹೋಲಿಸಿದಾಗ ನನಗೆ ಬಂದ ಅನುಮಾನ ಸಹಜ. ಮತ್ತೊಮ್ಮೆ ದೃಢೀಕರಿಸಲು  " ಏನ್ ಹೇಳಿದೆಯೋ ಸುಬ್ಬೂ ...?? " ಎಂದು ಕೇಳಿದೆ. "ಅಲ್ವೋ ಆಫೀಸಲ್ಲಿ ಬಿಟ್ಟಿ ಸಿಗುತ್ತೆ ಅಂತ ಮನೆಗೆ ತೆಗೊಂಡು ಬಂದು ಕೆಲ್ಸಕ್ಕೆ ಬಾರದಿದ್ದೆಲ್ಲ ಗೀಚಿ ರಾಶಿ ಹಾಕಿದ್ಯಲ್ಲ ಈ ಖಾಲಿ ಪೇಪರು... ಇದನ್ನ ಕ್ಲೀನ್ ಮಾಡೋದಕ್ಕೆ ನಿಮ್ಮಜ್ಜ ಬರ್ತಾರಾ ?? ಎಂದಾಗ ಆ ಕಲ್ಪನೆಯ ಕುದುರೆಯ ಕಾಲಿನ ಕೀಲು ಮುರಿದು ದೊಪ್ಪೆಂದು ವಾಸ್ತವ ಲೋಕಕ್ಕೆ ಬಿದ್ದೆನು. "ಲೋ ಆ ಪೇಪರ್ ಎಲ್ಲ ಕಟ್ಟಿ ಗುಜರಿಯವನಿಗೆ ಮಾರಿದರೆ ಕೇಜಿಗೆ ಮೂರು ರೂಪಾಯಿ ಪ್ರಕಾರ ಒಂದು ಹದಿನೈದು ರೂಪಾಯಿ ಸಿಗುತ್ತೆ ....ಸಂಜೆ ಚಾ ಖರ್ಚಿಗೆ ಆಗುತ್ತೆ "  ಸುಬ್ಬು...

ಶ್ಯಾನು "ಭೋಗ "

ಭೋಗ ಷಟ್ಪದಿಯಲ್ಲಿ ರಚಿತವಾದ ಈ ಷಟ್ಪದಿಗಳು ದಿನಾಂಕ 07/02/2010   ರ ವಿಜಯಕರ್ನಾಟಕದಲ್ಲಿ ( ಶ್ರೀವತ್ಸ ಜೋಷಿಯವರ " ಪರಾಗಸ್ಪರ್ಶ " ಅಂಕಣದಲ್ಲಿ ) ಪ್ರಕಟಿತ . ============================================================ ಏರುಪೇರು ಭರತವಿಳಿತ ಜಾರುಬಂಡಿ ಮೆಟ್ಟಿಲಾಟ ಷೇರುಮಾರುಕಟ್ಟೆಯೊಳಗಿದೆಷ್ಟು ಗೊಂದಲ ಬಾರು - ಬೀರಿನಂತೆ ನೀವು ಷೇರುದಾಸನಾದರಂಡ್ರ ವೇರಿನಲ್ಲಿ ಬರುವ ದಿನವು ದೂರವುಳಿಯದು ==================================================== ಭೋಗದಲ್ಲಿ ಬರೆದೆ ಎಂದು ಬೀಗುತಿರುವ ನೀನು ಹೀರೊ ಆಗಬೇಡವೆಂದು ಗೆಳೆಯ ಟಾಂಟು ಹೊಡೆದನು ಯೋಗ ನೆಟ್ಟಗಿದ್ದು ಪ್ರಕಟ ವಾಗಿಬಿಟ್ಟರೆನ್ನ ಕವನ ಬೀಗ ಜಡಿದು ಬಿಡುವೆ ನೋಡಿರವನ  ಬಾಯಿಗೆ  ====================================== ಆಲು ಬೆಲೆಯು ಗಗನದಲ್ಲಿ ಪಾಲಕಂತು ಮುಟ್ಟಲಾರೆ ಕಾಲು ಕೇಜಿ ಬದನೆಕಾಯಿಗೆಂಟು ರೂಗಳು ಚೀಲ ತುಂಬ ಸೊಪ್ಪು ತರುವ ಕಾಲ ಹೋಯ್ತು ಈಗ ದೊಡ್ಡ ಸಾಲ ಮಾಡಬೇಕು ಕಾಯಿಪಲ್ಲೆ ತಿನ್ನಲು  ========================================== ಕೊಂದು ತಂದು ಕೋಳಿಯನ್ನು ಬೆಂದ ಮೇಲೆ ಖಾರ ಹಚ್ಚಿ ತಂದುರಿಯನು ಮಾಡಿ ತಿಂದರೆಷ್ಟು ಚೆನ್ನವೋ ಅಂದು ರಾತ್ರಿ ತಂದೆಯೊಡನೆ ಒಂದು ಪೆಗ್ಗು ವಿಸ್ಕಿ ಕುಡಿದು ಗುಂಡು - ತುಂಡು  ಸೇವೆಯನ್ನು ಪೂರ್ಣ ಮಾಡಿದೆ .  ======...