Skip to main content

Posts

Showing posts from December, 2009

ನನ್ನ ಸ್ಟೈಲು ನನ್ನದು

ನೂರಾರು ಮತವಿಹುದು ಲೋಕದುಗ್ರಾಣದಲಿ ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ಎಂದು ಮಂಕುತಿಮ್ಮನ ಕಗ್ಗದಲ್ಲಿ ಶ್ರೀ ಡಿ . ವಿ ಗುಂಡಪ್ಪನವರು ಹೇಳಿದ್ದಾರೆ. ಈ ಪ್ರಪಂಚದಲ್ಲಿ ನಮಗೆ ಬೇಕಾದ ವಿಚಾರಗಳನ್ನು ನಾವು ಅನುಸರಿಸಬಹುದು. ಹಾಗೆಯೇ ಸಾಹಿತ್ಯಲೋಕದಲ್ಲಿ ಇರುವ ನೂರಾರು ಪ್ರಾಕಾರಗಳಲ್ಲಿ ನಮಗೆ ಬೇಕಾದ ಮಾರ್ಗವನ್ನು ನಾವು ಅನುಸರಿಸಬಹುದು. ಪ್ರಾಸ-ಛಂದಸ್ಸು-ಅನುಭವ-ಹಾಸ್ಯ-ಅನುವಾದ-ಕವಿತೆ-ಕವನ-ಹನಿ-ಮಿನಿ ಒಂದೇ ?? ಎರಡೆ ?? .ಆದರೆ ಯಾವುದೇ ಶೈಲಿಯಲ್ಲಿ ಬರೆದರೂ ಅದು ಮನದ ಮಾತನ್ನು ಅಕ್ಷರದ ಮೂಲಕ ಓದುಗನಿಗೆ ತಲಿಪಿಸಬೇಕು. ನನ್ನ ಹಲವು ಮಿತ್ರರು ನನಗೆ ಆಂಗ್ಲಭಾಷೆಯಲ್ಲಿ ಬರೆಯಲು ಹೇಳಿದ್ದಾರೆ. ಆದರೆ ನನಗೆ ಅದು ಅಸಾಧ್ಯ.ಯಾವುದೇ ಲೇಖನ ಬರೆಯುವಾಗ ಮನಸ್ಸಿನಲ್ಲಿ ಏನೊ ಒಂದು ವಿಷಯ ಬಂದರೆ ಅದು ಬರಹಕ್ಕೆ ಇಳಿಸುವಾಗ ಶಬ್ದಗಳಿಗೆ ತಡಕಾಡಬಾರದು ಅದು ಮುಕ್ತವಾಗಿ ಹರಿಯಬೇಕು ಆಗ ಮಾತ್ರ ಬರೆಯುವುದು ಬರಹಗಾರನಿಗೆ ಸಂತೋಷ ಕೊಡುತ್ತದೆ. ನನಗೆ ಆಂಗ್ಲಭಾಷೆಯಲ್ಲಿ ಅಷ್ಟು ಹಿಡಿತವಿಲ್ಲ. ಈಗ ನನಗೆ ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿ ಇಲ್ಲ ಎಂದು ಬರೆಯಬೇಕೆಂದುಕೊಳ್ಳಿ. ಕನ್ನಡದಲ್ಲಿ ಬರೆದರೆ ಅದಕ್ಕೆ "ಅಮ್ಮಾ... ಎಂದರೆ ಆ ಶಬ್ದ ಗಂಟಲಿನಿಂದ ಹೊರಡುವುದಿಲ್ಲ ಹೃದಯದಿಂದ ಬರುತ್ತದೆ ಎಂದೋ ಪ್ರಪಂಚದಲ್ಲಿ ಸಾಗರಕ್ಕಿಂತ ಆಳವಾದುದು ಪರ್ವತಕ್ಕಿಂತ ದೊಡ್ಡದು ಯಾವುದು ಎಂದರೆ ಅದು ತಾಯಿಯ ಪ್ರೀತಿ ಎಂದು ಕೊಂಬು ಬಾಲ ಸೇರಿಸಿ ಬರೆಯಬಹುದು. ಅದೇ ಆಂಗ್ಲ ಭಾಷೆ...

ಇಟ್ಟಿದ್ದು ಬಟ್ಟಾದರೆ ವಾಟೆಂದರೇನು ??

ಈ ವಾಕ್ಯ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಕೇಳಿದ್ದು . ಎಲ್ಲೋ ಅಕ್ಕನಿಂದಲೋ ಅಣ್ಣನಿಂದಲೋ ಕೇಳಿ ಬಾಯಿಪಾಟ ಹೊಡೆದು ಕ್ಲಾಸಿಗೆ ಬಂದು ಸುಮಂತ್ ಇಟ್ಟಿದ್ದು ಬಟ್ಟಾದರೆ ವಾಟೆಂದರೇನು? ಎಂದು ಗೆಳೆಯರು ಕೇಳಿದಾಗ ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲದ ನಾನು ಅದೇನೆಂದು ತಿಳಿಯಲು ತಿಪ್ಪರಲಾಗ ಹಾಕಿದ್ದೆ . ಆಮೇಲೆ it=ಇದು but=ಆದರೆ what ಅಂದರೆ ಏನು? ಅಂತ ತಿಳಿದಾಗ ಅಯ್ಯೋ ಇಷ್ಟೇನಾ? ಎಂದು ನಿಟ್ಟುಸಿರಿಟ್ಟಿದ್ದೆ. ಹೀಗೆ ಯಾವುದೇ ವಿಷಯವೇ ಆಗಲೀ ತಿಳಿಯುವ ಮೊದಲು ಏನೋ ಪರ್ವತದಂತೆ ಭಾಸವಾದರೂ ತಿಳಿದಮೇಲೆ ಪೀಚು ಪೀಚೆಂದೆನಿಸುವುದು ಸಹಜವೇ . ಇತ್ತೀಚೆಗೆ ದಿನಪತ್ರಿಕೆಯಲ್ಲಿ ಶತಾವಧಾನಿ ಆರ್. ಗಣೇಶ್ ಅವರ ಚಮತ್ಕಾರ ಕವಿತ್ವ ಓದಿದಾಗ ಇಂಥವೇ ಹಲವು ಸಮಸ್ಯಾ ಪೂರ್ತಿ ಶ್ಲೋಕ /ವಾಕ್ಚಾತುರ್ಯಗಳು ನೆನಪಿಗೆ ಬಂದವು . ಅಲ್ಲದೆ ಭಾಷಾ ಜ್ಞಾನವಿಲ್ಲದೇ ಆಗುವ ಅಭಾಸಗಳು ಆ ಸಂಧರ್ಭದಲ್ಲಿ ಪೇಚಿಗೆ ಸಿಲುಕಿಸಿದರೂ ಆಮೇಲೆ ಹಾಸ್ಯಕ್ಕೆ ಒಳ್ಳೆಯ ವಿಷಯಗಳಾಗುತ್ತವೆ. ಅವುಗಳ ಸಂಗ್ರಹವೇ ಈ ಲೇಖನ . 1) ನಮ್ಮ ಊರಿನಲ್ಲಿ ಯಾರಾದರೂ " ಏನಾಯ್ತೋ dull ಇದ್ದೀಯ? " ಎಂದಾಗ ನಾವು ಹೇಳುವುದು "ದಶರಥನ ಸುತನರಸಿಯು ನಾಸಿಕದೊಳು ಪೊಕ್ಕು ಪೀಡಿಸುತಿಹಳು" .... ಏನಿಲ್ಲ ಶೀತಕ್ಕೆ ಕುಂದಾಪುರ ಕನ್ನಡದಲ್ಲಿ ರಾಗದಿಂದ ಸೀತು/ಸೀತ ಅನ್ನುತ್ತಾರೆ . ಅದೆ ... ದಶರಥ ಸುತ -- ರಾಮ --ಅರಸಿ --- ಸೀತಾ ಮೂಗಿನಲ್ಲಿ ಸೇರಿ ಪೀಡಿಸುತ್ತಿದ್ದಾಳೆ . ಮೂಗಿನಲ್ಲಿ ಜೋಗ ಅನ್ನ...