Skip to main content

Posts

Showing posts from December, 2011

ನೋಡಿ ಸ್ವಾಮೀ ನಾವಿರೋದೇ ಹೀಗೆ

======================================== ನೋಡೀ... ಸ್ವಾಮೀ.... ನಾವಿರೋದೆ ಹೀಗೆ ======================================== ನಾನು ಯಾರು ? ಹೇಗೆ ? ಯಾಕೆ ?? ನೂರು ಪ್ರಶ್ನೆ ಎಸೆದೆ ಬಂದ ಉತ್ತರಗಳ ಕೂಡಿ ಕವನವೊಂದ ಹೊಸೆದೆ| ಬರೆಯುತಿರುವೆ ಈ ಕವನದಿ ನಾನು ನನ್ನ ಬಗ್ಗೆ ನೋಡೀ... ಸ್ವಾಮೀ.... ನಾವಿರೋದೆ ಹೀಗೆ|| ಎಂಜಿನಿಯರಿಂಗ್ ಓದಿ ಟೀಸಿಯೆಸ್ಸಿನಲ್ಲಿ ದುಡಿಮೆ ಕೃಷ್ಣವರ್ಣ ತಲೆಯ ಮೇಲೆ ಕೂದ್ಲು ಸ್ವಲ್ಪ ಕಡಿಮೆ ಕುಂದಾಪುರದವನು ಇರುವೆ ಬೆಂಗಳೂರಿನಾಗೆ ಹೋಯ್ ಮಾರಾಯ್ರೆ... ನಾವಿಪ್ಪುದೇ ಹೀಂಗೆ!! ಇಹುದು ನನಗೆ ಕವಿತೆ ಕವನ ಬರೆಯುವಂತ ಹುಚ್ಚು ಮೌನ ಕೂಡಿ ಬರದು ನನಗೆ ಮಾತು ಸ್ವಲ್ಪ ಹೆಚ್ಚು ಮನದ ಮಾತ ಹಾಕಿ ಬಿಡುವೆ ಪೇಪರಲ್ಲಿ ಗೀಚಿ ಪಳೆಯಾಚಿ ಮಾಮ್ಮಾ... ಹಾವೆ ಆಸುಚೆ ಅಶೀಚಿ ಇಡ್ಲಿ ಚಟ್ನಿ ದೋಸೆಯಂತು ನನ್ನ ಫೇವರಿಟ್ಟು ಊರು ಬಿಟ್ಟು ಓಡಿ ಬಿಡುವೆ ಕಂಡರೆ ಉಪ್ಪಿಟ್ಟು ಬ್ರೆಡ್ಡು ಬನ್ನು ಆಗೋದಿಲ್ಲ ಇಷ್ಟ ಪೂರಿ - ಬಾಜಿ देखिये... मै ऐसाहि हू माजि.....॥ ಬೇಳೆ ಸಾರು ಹಪ್ಪಳವಿರೆ ಅದುವೇ ಮೃಷ್ಟಾನ್ನ ಉಪ್ಪಿನಕಾಯ್ ಮಜ್ಜಿಗೆಯಿರಲೂಟವೆಷ್ಟು ಚೆನ್ನ! ಆಲೂಗಡ್ಡೆ ಪರಮಮಿತ್ರ ಇಷ್ಟ ಬಸಳೆ ನುಗ್ಗೆ ನೋಡೀ... ಸ್ವಾಮೀ.... ನಾವಿರೋದೆ ಹೀಗೆ ಚಾಕಲೇಟು ಬರ್ಫಿ ನೋಡೆ ಇರುವೆಯಾಗಿ ಬಿಡುವೆ ಜಾಮೂನನು ತಂದವರಿಗೆ ಒಲಿದು ವರವ ಕೊಡುವೆ ಹಣ್ಣಿನಲ್ಲಿ ಇಷ್ಟವೆನಗೆ ಮಾವ...