********************************************************** ಈ ಲೇಖನವನ್ನು ಓದುವ ಮೊದಲು ನನ್ನ "ನಾನು - ನನ್ನ ಸಂಸಾರ " ಲೇಖನ ಓದಿದರೆ ಇದರ ಹಾಸ್ಯದ ಹಿನ್ನೆಲೆಯ ಕುರಿತು ತಿಳಿಯಬಹುದು . http://shanuisking.blogspot.com/2009/03/blog-post_17.html ********************************************************** ಊಫ್ .. ಈ ಜನಕ್ಕೆ ಯಾವ್ ಟೈಮ್ ನಲ್ಲಿ ಏನ್ ಮಾತಾಡ್ಬೇಕು ಅನ್ನೋದೇ ಗೊತ್ತಾಗಲ್ಲ ....ಇಷ್ಟು ದಿನ ನಾನು ಶಾಂತಿ ಬಗ್ಗೆ ಬರೆದ ಎಲ್ಲ ಲೇಖನಗಳನ್ನು ಅವಳಿಗೆ ತಿಳಿಯದಂತೆ ಸೇಫ್ ಲಾಕರನಲ್ಲಿ ಇಟ್ಟಿದ್ದೆ . ಮೊನ್ನೆ ಶನಿವಾರ ಸಂತೆಗೆ ಇವಳನ್ನು ಕರೆದುಕೊಂಡು ಹೋದಾಗ ಭಾದ್ರಪದ ಮಾಸ ಬರದಿದ್ದರೂ ಸಡನ್ನಾಗಿ ಗಣೇಶ ವಕ್ಕರಿಸಿಕೊಂಡು ಬಿಟ್ಟ . "ಏನ್ ಅತ್ತಿಗೆ ?? ನುಗ್ಗೆಕಾಯಿ ಖರೀದೀನಾ ??? ಎಂದು ಕೇಳಿ ಬಿಡೋದೇ ??. ನನ್ನ ಕಣ್ಸನ್ನೆ ನೋಡ್ತಾನೆ ಇಲ್ಲ ....... ಯಾಕೋ ಗಣೇಶ ಹೀಗೆ ಯಾಕೆ ಕೇಳ್ತಾ ಇದ್ದೀಯಾ ?? ಎಂದು ಇವಳು ಕೇಳಿದಾಗ ಮಗ್ಗಿ ಕಂಠಪಾಠ ಹೊಡೆದಂತೆ ನನ್ನ ಲೇಖನದ ಎಲ್ಲ ಜೋಕುಗಳನ್ನು ಕಕ್ಕಿಬಿಟ್ಟ ..... ಏನ್ ಚೆನ್ನಾಗಿ ಬರೆದಿದ್ದಾರೆ ನಿಮ್ ಮನೆಯವರು ಅಂತ ಹೊಗಳಿಕೆ ಬೇರೆ . ನನಗೆ ನಗುವುದೋ ಅಳುವುದೋ ತಿಳಿಯಲಿಲ್ಲ . ಸಾಯಂಕಾಲ ಮನೆಯಲ್ಲಿ ನನಗೆ ನಡೆದ ಸತ್ಯನಾರಾಯಣ ಪೂಜೆಯ ಬಗ್ಗೆ ಇನ್ಯಾವತ್ತಾದರೂ ಬರೆಯುತ್ತೇನೆ . ಈಗ ಮುನಿಸಿಕೊಂಡ ಶಾಂತಿಯನ್ನು ಒಲಿಸಿಕೊಳ್ಳಲು ಈ ಶಾಂತಿಮಂತ್ರ...
ಇದರಲ್ಲಿ ಬರೆದ ಲೇಖನಗಳಲ್ಲಿ ಕೆಲವು ನನ್ನ ಕಲ್ಪನೆಯ ಕೂಸಾದರೆ ಕೆಲವು ಅನುಭವದ ಬರಹಗಳು . ಒಟ್ಟಿನಲ್ಲಿ ಪ್ರತಿ ಲೇಖನದ ಕೊನೆಯಲ್ಲಿ ಓದುಗರ ತುಟಿಯಂಚಿನಲ್ಲಿ ಸ್ವಲ್ಪ ಮುಗುಳ್ನಗೆ ಉಳಿದದ್ದೇ ಹೌದಾದರೆ ನನ್ನ ಪ್ರಯತ್ನ ಸಾರ್ಥಕ . ಅದೇ ನನಗೆ ಸಲ್ಲುವ ಪ್ರಶಸ್ತಿ. ========================ವಿಕಟಕವಿ ==================