Skip to main content

Posts

Showing posts from February, 2009

ಅಪಾರ್ಥ ಕೋಶ

ಒಂದು 6-7 ವರ್ಷ ಹಿಂದಿನ ಮಾತು . ಅಗತ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದೆ . ಅಪ್ಪನೊಂದಿಗೆ ಬಸವನಗುಡಿ ಬಳಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ರಸ್ತೆ ದಾಟಲು ಕಾಯುತ್ತಿದ್ದೆವು . ಎದುರಿನಿಂದ ಟ್ಯಾಂಕರ್ ಒಂದು ಹೋಯಿತು . ಥಟ್ಟನೆ ನಾನು-ಅಪ್ಪ ಪರಸ್ಪರ ನೋಡಿ ನಕ್ಕೆವು . ಯಾಕೆಂದು ಕೇಳುತ್ತೀರಾ ?? ಏನಿಲ್ಲ ಆ ಟ್ಯಾಂಕರು " ನೀರು ಸರಬುರುಜು ವಾಹನ " ಆಗಿತ್ತು . ( ಅದು ನೀರು ಸರಬರಾಜು ವಾಹನ ಆಗಬೇಕಿತ್ತು ). ಅದರ ಅರ್ಥ ಏನೆಂದು ದೇವರೇ ಬಲ್ಲ . ಮುಂದೆ ಬಸ್ ನಿಲ್ದಾಣದಲ್ಲಿ ನಿಂತಾಗ ಬಸ್ ನ ಬೋರ್ಡ್ ನಲ್ಲಿ "ಕೆ . ಆರ್ ಪೇಟೆ , ಕಂ. ಬ .ನಿ " ಎಂದು ಬರೆದದ್ದು ಓದಿ ನಿಜಕ್ಕೂ ಕಂಬನಿ ಹರಿಯಿತು. (ಅದು ಕೆಂ .ಬ .ನಿ :- ಕೆಂಪೇಗೌಡ ಬಸ್ ನಿಲ್ದಾಣ ಆಗಬೇಕಿತ್ತು ) . ಆ Painter ಗೆ ಸ್ವಲ್ಪ ಕಡಿಮೆ ಹಣ ಕೊಟ್ಟಿರಬೇಕು ಅವನು ಹೀಗೆ ಸೇಡು ತೀರಿಸಿಕೊಂಡಿದ್ದ . ಇದು ಸಣ್ಣ ಅಳತೆಯ ತಪ್ಪುಗಳು "ಅಪಾರ್ಥ " ಅನ್ನುವಂತದ್ದೇನೂ ಇಲ್ಲ . ಭಾರೀ ಅಪಾರ್ಥಕ್ಕೆ ಎಡೆ ಮಾಡುವಂಥ ತಪ್ಪುಗಳನ್ನು ಗಮನಿಸಿದ್ದೇನೆ . ನೆನಪಾದಷ್ಟನ್ನು ಇಲ್ಲಿ ಬರೆದಿದ್ದೇನೆ . ಮೊನ್ನೆ ಸುಭಾಷಿತ ಪುಸ್ತಕ ಅರ್ಥ ( ಅಪಾರ್ಥ ) ಸಮೇತ ಓದುತ್ತಿದ್ದೆ . ಅದರ ಒಂದು ಶ್ಲೋಕ ಮತ್ತು ಅದರ ಅರ್ಥ ಹೀಗೆ ಕೊಟ್ಟಿದ್ದರು . ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ || ಸಾರಾಂಶ : ಎಲ್ಲಿ ನಾರಿಯರು ಪೂಜಿಸುತ್ತಾರೋ...

ಸರಸ -ವಿರಸ

ನಿಮ್ಮ ಹಾಸ್ಯ ನಿಮಗೆ ಅರ್ಥವಾದರೆ ಸಾಕೆ ?? ಜೋಕು ಮಾಡುವ ಗೆಳೆಯ ಒಂದಿನಿತು ಜೋಕೆ || ಹಾಸ್ಯ ಶ್ರೋತೃಗಳಿಗರ್ಥವಾದರೆ ಕ್ಷೇಮ ಅಪಾರ್ಥವಾದರೆ ಗತಿಯು ಕೋದಂಡರಾಮ || ಹಮ್... ಹಾಸ್ಯ ಇದೊಂದು ಬ್ರಹ್ಮಾಸ್ತ್ರ . ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು . ಆದರೆ ಪರಿಣಾಮದಲ್ಲಿ ಇದು ಸ್ನೇಹಕ್ಕೂ ಸೈ ಸಮರಕ್ಕೂ ಜೈ .ಸಂದರ್ಭೋಚಿತ ಹಾಸ್ಯವೂ ಸೃಷ್ಟಿಯಾಗಬಹುದಾದಂತ ಉದ್ವಿಗ್ನ ವಾತಾವರಣವನ್ನು ಕ್ಷಣಮಾತ್ರದಲ್ಲಿ ತಿಳಿಗೊಳಿಸಬಹುದು ಅಂತೆಯೇ ಅಪಾರ್ಥವಾದ ಹಾಸ್ಯವೂ ಸ್ನೇಹದಲ್ಲಿ ಭಾರೀ ಬಿರುಕು ಸೃಷ್ಟಿಸಬಹುದು.ಈಗ ನೀವೇ ನೋಡಿ , call,chat,email,orkut ಎಂದು ಸದಾ ಸಂಪರ್ಕದಲ್ಲಿರುತ್ತಿದ್ದ ನನ್ನ ಕೆಲವು ಗೆಳೆಯರು ನನ್ನ ಹಾಸ್ಯದ ಬಲಿಪಶುಗಳಾಗಿ ಇಂದು ಒಂದು missed call ಕೂಡ ಕೊಡದೆ ಇರುವುದು ಕಹಿ ಸತ್ಯ . ಅದು ಬಿಡಿ ನನ್ನ ಪ್ರೇಮದಲ್ಲಿ ನನ್ನ ಹಾಸ್ಯ ಹೇಗೆ ಹೇಗೆ ಅಡ್ಡಗಾಲಾಯಿತೆಂಬ ದುರಂತ ಕತೆಯನ್ನು ಹಾಸ್ಯದ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ . ಹೌದು .. ನಂಬಿದ್ರೆ ನಂಬಿ ಬಿಟ್ರೆ ಬಿಡಿ , ನಾನೂ love ಮಾಡಿದ್ದೀನಿ . ಒಂದಲ್ಲ ಎರಡು ಬಾರಿ ಮತ್ತೆ ಮೂರನೇ ಬಾರಿ attempt ಕೂಡ ಮಾಡಿದ್ದೆ . ಆದರೆ ಪ್ರಥಮ ದ್ವಿತೀಯ ತೃತೀಯ ಎಲ್ಲ ಚುಂಬನದಲ್ಲೂ ದಂತಭಗ್ನವಾಗಿ " ಹಲ್ಲಿಲ್ಲದ ಸರದಾರನಾಗಿ " ಈಗ ಅಖಿಲ ಭಾರತ ಬ್ರಹ್ಮಚಾರಿಗಳ ಸಂಘ (ರಿ) ದ ಸದಸ್ಯನಾಗಿದ್ದೇನೆ . ಏನು ??? ಏನಾಯ್ತು ಎಂದು ಕೇಳು...