ನವೆಂಬರ್ 22 ರಂದು ಆಪೀಸಿನಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಪೀಸಿನಲ್ಲಿರುವವರ ಹೆಸರನ್ನೆಲ್ಲ ಸೇರಿಸಿ ಹೊಸೆದ ಪದ್ಯ. ನೀಲಿ ಬಣ್ಣದಲ್ಲಿ ಬರೆದವು ಅವರ ಹೆಸರುಗಳು. ದೇವಾದಿದೇವತೆಗಳು ಸಭೆಯನ್ನು ನಡೆಸಿ ಸಭೆಯೊಳಗೆ ಸು ಮಧು ರ ಕನ್ನಡವ ಬಡಿಸಿ || ಎಲ್ಲಾ ದೇವರಿಗೂ ಕನ್ನಡವು ಹಿಡಿಸಿ ಬಂದು ಕೂತಿಹರೆಲ್ಲ tatasky ODC || ಕೃಷ್ಣ ನಿಹನಿಲ್ಲಿ ಇಹನು ರಘು-ರಾಮ ಮಂಜುನಾಥ ರು ತ್ರಿಮೂರ್ತಿಯಲಿ ಹರಸಿರುವ ಧಾಮ || ಪಾವನ-ಪುನೀತರಾಗಿ ಕೇಳಿ ಮೋಹನ ನ ಬಾನ್ಸುರಿ ಸ್ವಪ್ನ ದಲ್ಲಷ್ಟೇ ಸಿಗುವುದು ಇಂಥಹ ಚಾನ್ಸು ರೀ... || ವಿಘ್ನ ದಿಂ ಕಾಯುತಿಹ ದ್ವಾರದಲೇ ಬೆನಕ ಎಲ್ಲ ದೇವರಿಗೂ ಶರಣು ನಮ್ಮ ಗುರು ಗಳ ತನಕ ಸಂಕಟದಿ ಕರೆದೊಡನೆ ಸ್ವಾಮಿ ವೆಂಕಟೇಶ ಹರುಷ ದಲಿ ಕಳಿಸುವ...
ಇದರಲ್ಲಿ ಬರೆದ ಲೇಖನಗಳಲ್ಲಿ ಕೆಲವು ನನ್ನ ಕಲ್ಪನೆಯ ಕೂಸಾದರೆ ಕೆಲವು ಅನುಭವದ ಬರಹಗಳು . ಒಟ್ಟಿನಲ್ಲಿ ಪ್ರತಿ ಲೇಖನದ ಕೊನೆಯಲ್ಲಿ ಓದುಗರ ತುಟಿಯಂಚಿನಲ್ಲಿ ಸ್ವಲ್ಪ ಮುಗುಳ್ನಗೆ ಉಳಿದದ್ದೇ ಹೌದಾದರೆ ನನ್ನ ಪ್ರಯತ್ನ ಸಾರ್ಥಕ . ಅದೇ ನನಗೆ ಸಲ್ಲುವ ಪ್ರಶಸ್ತಿ. ========================ವಿಕಟಕವಿ ==================