೧) ಏನೋ ಸುಮಂತಾ ಸಿಗರೇಟ್ ಎಳೀತೀಯೇನೋ ಎಂದು ಅಪ್ಪ ಕೇಳಿದಾಗ "ಅಪ್ಪಾ ಇದೇನು ಆಫರೊ ?? ಎನ್ ಕ್ವಾಯರಿನೊ?? ಎಂದು ಪ್ರಶ್ನಿಸಿದೆ . ೨) "ಇಂಗು ತೆಂಗು ಇದ್ದರೆ ನಮ್ಮ ಶಾಂತಿ ಕೂಡ ಅಡುಗೆ ಮಾಡುತ್ತಾಳೆ" ಎಂದು ಹೇಳಿದಾಗ "ರೀ ನಾಲ್ಕು ಜನರ ಮುಂದೆ ನನ್ನನ್ನು ಹೊಗಳಬೇಡ್ರಿ" ಎಂದು ನನ್ನ ಶಾಂತಿ ನಾಚಿ ನೀರಾದಳು. ೩)ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ "ಅನಕ್ಷರಸ್ಥರೇ ಗಮನಿಸಿ" ಎಂದು ಅನಕ್ಷರತೆಯ ದುಷ್ಪರಿಣಾಮಗಳ ಬಗ್ಗೆ ಬರೆದ ಬ್ಯಾನರ್ ಗಳನ್ನು ತೂಗು ಹಾಕಿದರು. ೪) ಚಿನ್ನದ ಪದಕ ಪಡೆದು ಮೆರಿಟ್ ನಲ್ಲಿ ಬ್ಯಾಂಕ್ ಕೆಲಸಕ್ಕೆ ಸೇರಿಕೊಂಡ ಗ್ರಾಜುಯೇಟ್ ಗಣೇಶನು ಕ್ಯಾಶ್ ನಲ್ಲಿ ಹತ್ತು ರುಪಾಯಿಯ ವ್ಯತ್ಯಾಸ ಕಂಡು ಬಂದಾಗ ಮೊದಲು ನೂರರ ಕಂತೆ ಎಣಿಸಲು ಶುರು ಮಾಡಿದನು. ೫) ತುಂಟತನ ಮಾಡುತ್ತಿದ್ದ ವಿದ್ಯಾರ್ಥಿಯನ್ನು ನೋಡಿ ಸಿಟ್ಟುಗೊಂಡ ತರಗತಿ ಅಧ್ಯಾಪಕರು "ಸಭ್ಯರೊಂದಿಗಿರಲು ನಾಲಾಯಕ್ ನೀನು ಹೋಗು ಹೆಡ್ ಮಾಸ್ಟರ ಬಳಿಗೆ " ಎಂದು ಗುಡುಗಿದರು. ೬)ನೂರು ರುಪಾಯಿ ಕದ್ದು ಜೈಲಿಗೆ ಬಂದು ಪೊಲೀಸರಿಂದ ಸಿಕ್ಕಾಪಟ್ಟೆ ಪೆಟ್ಟು ತಿಂದ ಕಿಸೆಗಳ್ಳನು ಅಜ್ಮಲ್ ಕಸಬ್ ಆರಾಮವಾಗಿ ಬಾಸ್ಮತಿ ಅನ್ನ ಊಟ ಮಾಡುವುದನ್ನು ಕಣ್ಣಾರೆ ನೋಡಿದನು. ೭)ಹತ್ತು ಲೇಖನಗಳಿಂದ ಸ್ವಲ್ಪ ಸ್ವಲ್ಪ ಕದ್ದು , ಖುದ್ದು ಬರೆದ ಲೇಖನವೆಂದು ಪ್ರಕಟಿಸಿದ ಲೇಖನಕ್ಕೆ "ತುಂಬಾ ಚೆನ್ನಾಗಿದೆ" ಎಂದು ಆ ಹತ್ತೂ ಲೇಖಕರು ಪ್ರ...
ಇದರಲ್ಲಿ ಬರೆದ ಲೇಖನಗಳಲ್ಲಿ ಕೆಲವು ನನ್ನ ಕಲ್ಪನೆಯ ಕೂಸಾದರೆ ಕೆಲವು ಅನುಭವದ ಬರಹಗಳು . ಒಟ್ಟಿನಲ್ಲಿ ಪ್ರತಿ ಲೇಖನದ ಕೊನೆಯಲ್ಲಿ ಓದುಗರ ತುಟಿಯಂಚಿನಲ್ಲಿ ಸ್ವಲ್ಪ ಮುಗುಳ್ನಗೆ ಉಳಿದದ್ದೇ ಹೌದಾದರೆ ನನ್ನ ಪ್ರಯತ್ನ ಸಾರ್ಥಕ . ಅದೇ ನನಗೆ ಸಲ್ಲುವ ಪ್ರಶಸ್ತಿ. ========================ವಿಕಟಕವಿ ==================