Skip to main content

Posts

Showing posts from December, 2008

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ...

ಕಲ್ಯಾಣಮಸ್ತು............

ಹೌದು...ನಾನೀಗ ಬರೆಯುತ್ತಿರುವುದು ಮದುವೆ ಬಗ್ಗೆ. ಸ್ವಂತ ಅನುಭವ ಇಲ್ಲ ನಿಜ ಆದರೆ ಅಲ್ಲಿ -ಇಲ್ಲಿ ಕೇಳಿ -ಓದಿ- ನೋಡಿ ಮದುವೆ ಬಗ್ಗೆ ತುಂಬಾ ತಿಳಿದುಕೊಂಡಿದ್ದೇನೆ . "ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡಿ" ಎಂಬ ಗಾದೆಯೇ ಇದೆ . ಸ್ವಂತ ಅನುಭವದ ಮೇಲೆ ಒಂದು ಸಂಪುಟವನ್ನೇ ರಚಿಸುತ್ತೇನೆ . ಈಗ ಅದರ Trailors ನೋಡಿ ಆನಂದಿಸಿ . ಯಾಕೆಂದರೆ Picture abhi bhi baaki hai mere dost ...... ಮದುವೆ ಗೆ ಅಗತ್ಯ ಜನರು : ಮದುವೆ ಗಂಡು ಯಾನೆ ವರ : "ಸಾಯೋ ಕುರಿಗೆ ಮೇಯೋದೆ ಕೆಲಸ " ಅನ್ನುತ್ತಾರಲ್ಲ ಹಾಗೆ ಇವನು . ನಕ್ಕು - ನಲಿದಾಡುತ್ತ ಭಾರೀ ಸಂತೋಷದಿಂದಿರುತ್ತಾನೆ . ಅದೇ ಅವನ ಕೊನೆಯ ನಗು . ನಗದು ತೆಗೆದುಕೊಂಡು ನಗುವುದ ಮರೆಯುವ ಭೂಪನೆಂದರೆ ಇವನೇ . ಮದುವೆ ಹೆಣ್ಣು urf ವಧು :- ಜಿರಳೆಗೆ ಮೀಸೆ ತೂರಿಸ್ಲಿಕ್ಕೆ ಜಾಗ ಕೊಟ್ಟರೆ ಆಮೇಲೆ ಇಡೀ ಜೀವ ನುಗ್ಗುತ್ತದಂತೆ . ಅಂತೆಯೇ ಮದುವೆಗೆ ಮುನ್ನ ತಗ್ಗಿ ಬಗ್ಗಿ ನಡೆಯುವ ಮದುವೆಯ ನಂತರ "Ring Master" ನಂತೆ ಗಂಡನೆಂಬ ಬಡಪಾಯಿಯನ್ನು ಕಣ್ಣ ಸನ್ನೆಯಲ್ಲೇ ಕುಣಿಸುವ ಕನ್ಯಾಮಣಿ . ಸಂಬಂಧಿಗಳು:- 2)ಅಪ್ಪ-ಅಮ್ಮ :ಹುಡುಗ ಹುಡುಗಿಯ ನಡುವೆ ಮುಂದೆ ನಡೆಯುವ Boxing ಪಂದ್ಯಾಟಕ್ಕೆ referee ಗಳು . Boxing ಪಂದ್ಯಕ್ಕೆ ಮೊದಲು ಸ್ಪರ್ಧಾಳುಗಳು shake hand ಮಾಡುವಂತೆ ವಧು -ವರರ ಕೈ ಮಿಲಾಯಿಸಿ ಶಾಸ್ತ್ರೋಕ್ತವಾಗಿ ವಾದ್ಯದವರ ಮುಖಾಂತರ ರಣಕಹಳೆ ...